





ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಪೋಷಕರಿಗೆ ಮಾಹಿತಿ ಕಾರ್ಯಗಾರ ಜು.18ರಂದು ನಡೆಯಿತು. ವಿವೇಕಾನಂದ ಪಿಯು ಕಾಲೇಜಿನ ಉಪನ್ಯಾಸಕ ಹರೀಶ್ ಶಾಸ್ತ್ರಿಯವರು ಕಾರ್ಯಾಗಾರ ನಡೆಸಿಕೊಟ್ಟರು. ‘ಪೋಷಕರು ಕೂಡ ಮೊಬೈಲ್ ಬಳಕೆಯನ್ನು ಅತಿ ಕಡಿಮೆ ಮಾಡಿ ಮಕ್ಕಳೊಂದಿಗೆ ಓದುವ ಕೆಲಸಕ್ಕೆ ಪ್ರೋತ್ಸಾಹಿಸುವುದು ಅಗತ್ಯ. ಪ್ರೌಢಶಾಲೆಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ದರಾಗುವುದು ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯ’ ಎಂದು ಹರೀಶ್ ಶಾಸ್ತ್ರಿ ಹೇಳಿದರು.



ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು, ಸಂಚಾಲಕ ಡಾ. ಸತೀಶ್ ರಾವ್ ಉಪಸ್ಥಿತರಿದ್ದರು. ನೂರಾರು ಪೋಷಕರು ಕಾರ್ಯಕ್ರಮದ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡರು.





ಸಹ ಶಿಕ್ಷಕಿ ರಕ್ಷಿತಾ ಪ್ರಾರ್ಥಿಸಿದರು. ಮುಖ್ಯ ಗುರು ರಾಜೇಶ್ ಎನ್ ಸ್ವಾಗತಿಸಿದರು. ಸಹಶಿಕ್ಷಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.









