ಪುತ್ತೂರು: ಪುತ್ತೂರಿನ ಪ್ರವಾಸಿ ತಾಣವಾದ ಬೀರಮಲೆ ಗುಡ್ಡದಲ್ಲಿ ಪ್ರತಿಷ್ಠಿತ ಸಂಸ್ಥೆಯಾದ ಪುತ್ತೂರಿನ ʼಬಿಂದುʼ ವತಿಯಿಂದ ನಿರ್ಮಾಣವಾದ “ಚಿಣ್ಣರ ಪಾರ್ಕ್” ಅನ್ನು ʼಬಿಂದುʼವಿನ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್ ಜು.23ರಂದು ಉದ್ಘಾಟಿಸಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಪುತ್ತೂರು ಬಿಂದು ನ್ಯಾಷನಲ್ ಪ್ರೊಕ್ಯೂರ್‌ಮೆಂಟ್ ಮೇನೇಜರ್ ಶ್ರೀಮುರಳೀಧರ,ಪುತ್ತೂರು ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್, ಪುತ್ತೂರು ಉಪ ವಲಯ ಅರಣ್ಯ ಅಧಿಕಾರಿ ರಾಜೇಂದ್ರ ಕುಮಾರ್, ಪುತ್ತೂರು ವಲಯ ಉಪ ವಲಯ ಅರಣ್ಯ ಅಧಿಕಾರಿ ಉಲ್ಲಾಸ್ ಹಾಗೂ ಪುತ್ತೂರು ವಲಯದ ಉಪ ವಲಯ ಅರಣ್ಯ ಅಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.