ಸುದಾನ ಶಾಲೆಯಲ್ಲಿ ಪೋಷಕರ ಸಮಾವೇಶ ಮತ್ತು ಮಕ್ಕಳ ಹಕ್ಕು ಮತ್ತು ಸುರಕ್ಷತೆಯ ಬಗೆಗೆ ಮಾಹಿತಿ ಕಾರ್ಯಕ್ರಮ

0

ಪುತ್ತೂರು: ಪುತ್ತೂರಿನ ಸುಧಾನ ವಸತಿ ಶಾಲೆಯಲ್ಲಿ ಜುಲೈ 23ರಂದು 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಮಾವೇಶ ನಡೆಯಿತು. ಜೊತೆಗೆ ಮಕ್ಕಳ ಹಕ್ಕು ರಕ್ಷಣಾ ವೇದಿಕೆ ಕರ್ನಾಟಕ ಸರಕಾರದವರು ಮಕ್ಕಳ ಹಕ್ಕುಗಳು ಮತ್ತು ಸುರಕ್ಷತೆಯ ಬಗೆಗೆ ಮಾಹಿತಿ ನೀಡಿದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೋರಬೇಕಾದ ಆಸಕ್ತಿ ಮತ್ತು ಅಧ್ಯಯನ ಶಿಸ್ತಿನ ಬಗೆಗೆ ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ಮಾರ್ಗದರ್ಶನ ಮಾಡಿದರು.

ಮಂಗಳೂರಿನ ಪಡಿ ಸಂಸ್ಥೆಯ ನಿರ್ದೇಶಕರಾದ ರೆನ್ನಿ ಡಿಸೋಜ ಮಾತನಾಡುತ್ತಾ “ ಪಾಲಕರು ಮಕ್ಕಳಿಗೆ ಆದರ್ಶವಾಗಬೇಕು. ಮಕ್ಕಳ ಮೇಲೆ ಪ್ರೀತಿ ಇದ್ದರಷ್ಟೆ ಸಾಲದು ಪರೀಕ್ಷಾ ದೃಷ್ಟಿಯು ಇರಬೇಕು. ಇದರಿಂದಾಗಿ ಮಕ್ಕಳು ಸತ್ಪ್ರಜೆಗಳಾಗಿ ಬಾಳುತ್ತಾರೆ” ಎಂದು ನುಡಿದರು. ಮಂಗಳೂರಿನ ಮಕ್ಕಳ ರಕ್ಷಣಾ ಆಯೋಗದ ಅಧಿಕಾರಿಗಳಾದ ವಜೀರ ರವರು ಮಕ್ಕಳ ಹಕ್ಕುಗಳು ಮತ್ತು ಹಲವು ಯೋಜನೆಗಳ ಬಗೆಗೆ ವಿವರಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ರವರು “ವಿದ್ಯಾರ್ಥಿಗಳು ಹಕ್ಕುಗಳನ್ನು ಅರಿತಿರಬೇಕು ಜೊತೆಗೆ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು” ಎಂದು ಕರೆ ನೀಡಿದರು.

ಪುತ್ತೂರಿನ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ಮಹಮ್ಮದ್ ರಫೀಕ್, ಸುದಾನ ಶಾಲೆಯ ಸುರಕ್ಷತಾ ಸಮಿತಿಯ ಅಧ್ಯಕ್ಷರಾದ ಮಾಮಚ್ಚನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ವಿನಿತಾ ಶೆಟ್ಟಿ ಉಪಾಧ್ಯಕ್ಷರಾದ ಪ್ರಮೋದ್ ಕುದ್ದಣ್ಣಾಯ ಅವರು ಶುಭಾಶಂಸನೆಗೈದರು. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ(ರಿ)ದ ಕಾರ್ಯದರ್ಶಿ ನಯನಾ ರೈ ವಂದನಾರ್ಪಣೆ ಮಾಡಿದರು. ಶಾಲಾ ಸಹ ಶಿಕ್ಷಕಿ ಶ್ಯಾಮಲಾ ಬಂಗೇರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸುದಾನ ಶಾಲೆಯ ಆಡಳಿತ ಅಧಿಕಾರಿ ಸುಶಾಂತ್ ಹಾರ್ವಿನ್, ಕೋಶಾಧಿಕಾರಿ ಆಸ್ಕರ್ ಆನಂದ್, ಉಪಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್ ಉಪಸ್ಥಿತರಿದ್ದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಪೋಷಕರು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುದಾನ ಶಾಲೆಯ ಜಾಗೃತಿ ಸೋಶಿಯಲ್ ಕ್ಲಬ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

LEAVE A REPLY

Please enter your comment!
Please enter your name here