ಪುತ್ತೂರು: ಕುಟುಂಬ ಸಮೇತ ನೋಡಬಹುದಾದ ಚಿತ್ರ ಧರ್ಮ ಚಾವಡಿ. ಅದ್ದೂರಿತನದಲ್ಲಿ ನಿರ್ಮಾಣಗೊಂಡ ಈ ರಿಚ್ ಸಿನೆಮಾ ಪುತ್ತೂರಿನ ಜಿ.ಎಲ್ ವನ್ ಮಾಲ್‌ನಲ್ಲಿ ಭಾರತ್ ಸಿನೆಮಾಸ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಸಿನಿ ಪ್ರೇಕ್ಷಕರ ಹೃದಯ ಗೆದ್ದು ಇದೀಗ ಮೂರನೇ ವಾರದತ್ತ ಮುನ್ನುಗ್ಗುತ್ತಿದೆ.
ಕೃಷ್ಣವಾಣಿ ಪಿಕ್ಚರ‍್ಸ್ ಲಾಂಛನದಲ್ಲಿ ತಯಾರಾದ, ಪುತ್ತೂರಿನ ಉದ್ಯಮಿ ಜಗದೀಶ್ ಅಮೀನ್ ನಡುಬೈಲು ನಿರ್ಮಾಣದ, ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ಮೂಡಿ ಬಂದಿರುವ ಧರ್ಮದೈವ ಚಿತ್ರತಂಡದ ಎರಡನೇ ಕಾಣಿಕೆಯಾಗಿರುವ ಧರ್ಮ ಚಾವಡಿ ಜು.11ರಂದು ಕರಾವಳಿದಾದ್ಯಂತ ಬಿಡುಗಡೆಗೊಂಡಿದ್ದು, ಇದೀಗ ಐದು ದೇಖಾವೆಯ ಹೌಸ್‌ಫುಲ್ ಪ್ರದರ್ಶನದೊಂದಿಗೆ ಮೂರನೇ ವಾರಕ್ಕೆ ಕಾಲಿಟ್ಟಿದೆ.
ಇತ್ತೀಚೆಗೆ ಮುಳ್ಳೇರಿಯಾ ಸೇರಿದಂತೆ ಕರಾವಳಿದಾದ್ಯಂತ ಬಿಡುಗಡೆಗೊಂಡಿರುವ ಥಿಯೇಟರ್‌ಗಳಲ್ಲಿ ಧರ್ಮ ಚಾವಡಿ ತುಳು ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪುತ್ತೂರ್‌ಡ್ ನಾಗವಲ್ಲಿನ್ ತೂಯರ ಜನಸಾಗರ ಎಂಬಂತೆ ಪುತ್ತೂರಿನ ಜಿ.ಎಲ್ ಮಾಲ್ ವನ್‌ನಲ್ಲಿನ ಭಾರತ್ ಸಿನೆಮಾಸ್‌ನಲ್ಲಿಯೂ ಚಿತ್ರವು ತುಳುವರ ಪ್ರೋತ್ಸಾಹದೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದೇಲಂಪಾಡಿ, ಕರ್ನೂರು, ಪುತ್ತೂರು, ಸರ್ವೆ, ಮಾಡಾವು, ಚಾರ್ವಾಕ, ಪೆರುವಾಜೆ, ಸುಳ್ಯ, ಜಾಲ್ಸೂರು, ಕೆಮ್ಮನಬಳಿ, ಕೇರಳದ ನೀಲೇಶ್ವರ್, ನುಳಿಯಾಲು, ಪಾಣಾಜೆ ಹೀಗೆ ಕರ್ನಾಟಕ ಹಾಗೂ ಕೇರಳದ ವಿವಿಧೆಡೆಯ ಸುಂದರ ತಾಣಗಳಲ್ಲಿ ಧರ್ಮ ಚಾವಡಿ ಚಿತ್ರವು ಚಿತ್ರೀಕರಣಗೊಂಡಿದೆ. ಚಿತ್ರತಂಡದ ಮೊದಲ ಸಿನೆಮಾ ಧರ್ಮದೈವ ತುಳುವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಎರಡನೇ ಸಿನೆಮಾ ತುಳುವರ ಆರಾಧನೆಯಾಗಿರುವ ದೈವಾರಾಧನೆ ಕುರಿತಾದ ‘ಧರ್ಮ ಚಾವಡಿ’ ಸಿನೆಮಾವು ಪ್ರೇಕ್ಷಕರ ಕರತಾಡನದೊಂದಿಗೆ ಯಶಸ್ವಿಯತ್ತ ಮುನ್ನುಗ್ಗುತ್ತಿದೆ.

ಸಿನೆಮಾಕ್ಕೆ ಪ್ರಸಾದ್ ಕೆ.ಶೆಟ್ಟಿರವರು ಅದ್ಭುತ ಸಂಗೀತ ನೀಡಿದ್ದಾರೆ. ಶ್ರೀನಾಥ್ ಪವಾರ್ ಸಂಕಲನ, ಅರುಣ್ ರೈ ಆರ್ಲಪದವು ಛಾಯಾಗ್ರಾಹಣ, ಸ್ಕೂಲ್ ಲೀಡರ್ ಖ್ಯಾತಿಯ ರಝಾಕ್ ಪುತ್ತೂರು ಚಿತ್ರಕಥೆ ಹೆಣೆದಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಮೇಶ್ ರೈ ಕುಕ್ಕುವಳ್ಳಿ, ನಾಯಕನಾಗಿ ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್‌ರವರ ಸಹೋದರ ಯುವ ಕಲಾವಿದ ರವಿ ಸ್ನೇಹಿತ್, ನಾಯಕಿಯಾಗಿ ಧನ್ಯ ಪೂಜಾರಿ, ಸಹ ನಾಯಕಿಯಾಗಿ ನೇಹಾ ಕೋಟ್ಯಾನ್ ಹಾಗೂ ನಿಶ್ಮಿತಾ ಶೆಟ್ಟಿ, ಚೇತನ್ ರೈ ಮಾಣಿ, ಸುರೇಶ್ ರೈ, ಪ್ರಕಾಶ್ ಶೆಟ್ಟಿ ಧರ್ಮನಗರ, ದೀಪಕ್ ರೈ ಪಾಣಾಜೆ, ಅಭಿನಯ ಚಕ್ರವರ್ತಿ ಸುಂದರ್ ರೈ ಮಂದಾರ, ರಂಜನ್ ಬೋಳೂರು, ಮನೀಶ್ ಶೆಟ್ಟಿ ಸಿದ್ಧಕಟ್ಟೆ, ರಕ್ಷಣ್ ಮಾಡೂರು, ಶರತ್ ಆಳ್ವ ಕೂರೇಲು, ರೂಪ ಡಿ.ಶೆಟ್ಟಿ, ಸವಿತಾ ಅಂಚನ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.
ಸಚಿನ್ ಉಪ್ಪಿನಂಗಡಿ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದು, ಚಿತ್ರವು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಎಲ್ಲಾ ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡಿದೆ. ಚಿತ್ರದಲ್ಲಿ ಬಹುತೇಕ ನಟರು ಹಾಗೂ ತಾಂತ್ರಿಕ ವರ್ಗ ಪುತ್ತೂರಿನವರೇ ಆಗಿದ್ದು, ತುಳು ಚಿತ್ರರಂಗದ ಬಹು ನಿರೀಕ್ಷೆಯ ಸಿನೆಮಾ ‘ಧರ್ಮ ಚಾವಡಿ’ ಚಿತ್ರವನ್ನು ವೀಕ್ಷಿಸದವರು ಅವರೆಲ್ಲರೂ ಕುಟುಂಬ ಸಮೇತರಾಗಿ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಿ, ತುಳು ಚಿತ್ರರಂಗವನ್ನು ಪ್ರೋತ್ಸಾಹಿಸಿ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಖಾವೆಗಳು..
ಬೆಳಿಗ್ಗೆ 10.30, ಮಧ್ಯಾಹ್ನ 1.30
ಸಂಜೆ 4.45, ರಾತ್ರಿ 7.30, 10.15