ನಿಮ್ಮ ಮಕ್ಕಳು ಆನ್‌ಲೈನ್‌ನಲ್ಲಿ ಏನು ನೋಡುತ್ತಿದ್ದಾರೆ!? ಈ ಮೂಲಕ ತಿಳಿದುಕೊಳ್ಳಿ

0

ಇಂದಿನ ದಿನಗಳಲ್ಲಿ ಮಕ್ಕಳನ್ನು ಮೊಬೈಲ್ ನಿಂದ ದೂರವಿಡುವುದು ತುಂಬಾ ಕಷ್ಟದ ಕೆಲಸ. ಪೋಷಕರಿಗೆ ಇದೊಂದು ಚ್ಯಾಲೆಂಜಿಂಗ್ ಕೆಲಸ ಎನ್ನಬಹುದು. ಇದಲ್ಲದೇ ಮಕ್ಕಳು ಮೊಬೈಲ್​ನಲ್ಲಿ ಏನು ನೋಡುತ್ತಿರಬಹುದು, ಆನ್ಲೈನ್​​​ ಗೇಮಿಂಗ್​​ ಹೀಗೆ ಹತ್ತು ಹಲವು ಗೊಂದಲಗಳು ಪೋಷಕರಲ್ಲಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಗೂಗಲ್ ಕ್ರೋಮ್ ಹೊಸ ಫೀಚರ್​​ ಅನ್ನು ಹೊರ ತಂದಿದ್ದು, ಈ ಮೂಲಕ ಮಕ್ಕಳು ಪ್ರತೀ ದಿನ ಮೊಬೈಲ್​​ನಲ್ಲಿ ಏನು ನೋಡುತ್ತಾರೆ ಎಂಬುದನ್ನು ಪೋಷಕರು ಸುಲಭವಾಗಿ ತಿಳಿಯಬಹುದಾಗಿದೆ.

ಮಕ್ಕಳಿಗಾಗಿ ಆನ್‌ಲೈನ್ ಸುರಕ್ಷತೆ:

ಫ್ಯಾಮಿಲಿ ಲಿಂಕ್ :
ನಿಮ್ಮ ಮಗುವು ಅಪ್ರಾಪ್ತ ವಯಸ್ಕರಾಗಿದ್ದರೆ , ನೀವು ಫ್ಯಾಮಿಲಿ ಲಿಂಕ್ ಮೂಲಕ ಅವನ/ಅವಳ Google ಖಾತೆಯನ್ನು ರಚಿಸಬಹುದು. ಖಾತೆಯನ್ನು ರಚಿಸಿದ ನಂತರ, ನೀವು Chrome ನಲ್ಲಿ ಸೆಟ್ಟಿಂಗ್‌ಗಳನ್ನು ನಿಮ್ಮ ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳಬಹುದು.

ವೆಬ್‌ಸೈಟ್ ಫಿಲ್ಟರ್:
ಇದರಲ್ಲಿ ನೀವು ವಯಸ್ಕ ವಿಷಯವನ್ನು ಹೊಂದಿರುವ ಸೈಟ್‌ಗಳನ್ನು ನಿರ್ಬಂಧಿಸಬಹುದು ಅಥವಾ ನಿಮಗೆ ಬೇಕಾದ ಸೈಟ್‌ಗಳನ್ನು ಮಾತ್ರ ಅನುಮತಿಸಬಹುದು.

Google ಸುರಕ್ಷಿತ ಹುಡುಕಾಟ(Profile Management):
ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುವುದರಿಂದ, ಆಕ್ಷೇಪಾರ್ಹ ಅಥವಾ ಅನುಚಿತ ಚಿತ್ರಗಳು ಮತ್ತು ವೀಡಿಯೊಗಳು Google ಹುಡುಕಾಟದಲ್ಲಿ ಗೋಚರಿಸುವುದಿಲ್ಲ. ಇದು ಮಕ್ಕಳಿಗೆ ಹುಡುಕಾಟವನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ.

ಅಪ್ಲಿಕೇಶನ್ ಪರ್ಮಿಷನ್​​:
ನಿಮ್ಮ ಮಗುವಿನ Chrome ಡೇಟಾದಲ್ಲಿ ಯಾವ ಅಪ್ಲಿಕೇಶನ್‌ಗಳು ಬಳಕೆಯಲ್ಲಿವೆ ಎಂಬುದನ್ನು ಸಹ ನೀವು ನೋಡಬಹುದು.

ಗೆಸ್ಟ್​ ಮೋಡ್:
ನಿಮ್ಮ ಮನೆಯಲ್ಲಿ ಅನೇಕ ಮಕ್ಕಳಿದ್ದರೆ ಅಥವಾ ನಿಮ್ಮ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಕಂಪ್ಯೂಟರ್ ಹಂಚಿಕೊಂಡರೆ, ಗೆಸ್ಟ್​ ಮೋಡ್ ತುಂಬಾ ಉಪಯುಕ್ತವಾಗಿದೆ. ಯಾರಾದರೂ Chrome ಅನ್ನು ಗೆಸ್ಟ್​ ಮೋಡ್ ಚಲಾಯಿಸಿದಾಗ, ಅವರ ಬ್ರೌಸಿಂಗ್ ಇತಿಹಾಸ, ಕುಕೀಗಳು ಮತ್ತು ಯಾವುದೇ ಡೌನ್‌ಲೋಡ್ ಮಾಡಿದ ಫೈಲ್‌ಗಳನ್ನು ಪೋಷಕರು ತಿಳಿದುಕೊಳ್ಳಬಹುದು.

ಆ್ಯಡ್​ ಬ್ಲಾಕರ್​:
ಇವು ಜಾಹೀರಾತುಗಳನ್ನು ನಿರ್ಬಂಧಿಸುತ್ತವೆ, ಇದು ಮಕ್ಕಳು ಅನಗತ್ಯ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದನ್ನು ತಡೆಯಬಹುದು.

ಪೋಷಕರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅತ್ಯಂತ ಮುಖ್ಯವಾದ ವಿಷಯವೆಂದರೆ ಇಂಟರ್ನೆಟ್ ಬಳಕೆಯ ಬಗ್ಗೆ ಮುಕ್ತವಾಗಿ ಮಾತನಾಡುವುದು. ಆನ್‌ಲೈನ್‌ನಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಅವರಿಗೆ ತಿಳಿಸಿ.

LEAVE A REPLY

Please enter your comment!
Please enter your name here