ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಸಾರಥ್ಯದಲ್ಲಿ ʼಗದ್ದೆಯಲೊಂದು ದಿನ ಭತ್ತದ ಕೃಷಿʼ ಕಾರ್ಯಕ್ರಮ

0

ಬಡಗನ್ನೂರು: ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಸಾರಥ್ಯದಲ್ಲಿ ಶಿಕ್ಷಕ-ರಕ್ಷಕ ಸಂಘ ಸರ್ವೋದಯ ವಿದ್ಯಾಸಂಸ್ಥೆಗಳು, ಸುಳ್ಯಪದವು ಇದರ ನೇತೃತ್ವದಲ್ಲಿ “ಗದ್ದೆಯಲೊಂದು ದಿನ ಭತ್ತದ ಕೃಷಿ” ಕಾರ್ಯಕ್ರಮವು ಜು. 30ರಂದು ಬೆಳಗ್ಗೆ ಗಂ 9.30ರಿಂದ ಕುಳದಪಾರೆ ಗದ್ದೆಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರಾದ ದಾಮೋದರ ಕುಳ ಅವರು ಉದ್ಘಾಟನೆ ಮಾಡಲಿದ್ದಾರೆ. ಸರ್ವೋದಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಿವರಾಮ್ H D ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಪ್ರಶಸ್ತಿ ವಿಜೇತ ಕೃಷಿಕ ಮೋನಪ್ಪ ಪೂಜಾರಿ ಕೆರೆಮಾರು ಭಾಗವಹಿಸಲಿದ್ದಾರೆ. ಉಪಸ್ಥಿತರಾಗಿ ಬೆಳ್ಳೂರು ಅಭಿವೃದ್ಧಿ ಸಾಯಿ ಸಮಿತಿ, ಅಧ್ಯಕ್ಷ ಚಂದ್ರಶೇಖರ ರೈ, ಬೆಳ್ಳೂರು ಗ್ರಾಮ ಪಂಚಾಯತ್ ಸದಸ್ಯೆ ಭಾಗೀರಥಿ, ಕಾಸರಗೋಡು ಗ.ಕ .ಸಾ ಅಕಾಡೆಮಿಯ  ಚನಿಯಪ್ಪ ನಾಯ್ಕ ನಿಡಿಯಡ್ಕ ಕುಳದಪಾರೆ ಅಂಗನವಾಡಿ ಶಿಕ್ಷಕಿ ರಾಷಿದ ಭಾಗವಹಿಸಲಿದ್ದಾರೆ.

ವಿಶೇಷ ಆಕರ್ಷಣೆ:
*ಗದ್ದೆಯಲ್ಲಿ ಮಕ್ಕಳಿಂದ ನೇಜಿ ನೆಡುವ ಕಾರ್ಯಕ್ರಮ, *ತುಳುನಾಡ ಪರಂಪರೆಯ ಕೋಣಗಳ ಓಟ , *ಸಂಧಿ ಹಾಗೂ ತುಳುಪಾಡ್ಡನ, *ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ 

LEAVE A REPLY

Please enter your comment!
Please enter your name here