ಪುತ್ತೂರು: ವಿಷ್ಣು ಗೆಳೆಯರ ಬಳಗ ವೈಕುಂಠಪುರ ಬುಳೇರಿಕಟ್ಟೆ ಇದರ ವತಿಯಿಂದ ಸಾರ್ವಜನಿಕ ಹಿಂದೂ ಬಾಂಧವರ ನಾಲ್ಕನೇ ವರ್ಷದ ಪುರುಷರ ಹಾಗೂ ಮಹಿಳೆಯರ ಮುಕ್ತ ಕೆಸರ್‌ಡ್ ಒಂಜಿದಿನ ಕಾರ್ಯಕ್ರಮವು ಜು.27ರಂದು ಬುಳೇರಿಕಟ್ಟೆಯ ಕಾಡ್ಲಗದ್ದೆಯಲ್ಲಿ ನಡೆಯಲಿದೆ.
ಬೆಳಗ್ಗೆ ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಭಟ್ ಬಬ್ಬಿಲಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದ್ದು, ಪುತ್ತೂರು ದರ್ಬೆಯ ಹೊಟೇಲ್ ಅಶ್ವಿನಿ ಇದರ ಮಾಲಕರಾದ ಎನ್. ಕರುಣಾಕರ ರೈ ದೆರ್ಲರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಕಾಲೇಜು ವೆಂಕಟನಗರ ಬೀಡು ಇದರ ಸ್ಥಾಪಕಾಧ್ಯಕ್ಷರಾದ ಬಾಲಕೃಷ್ಣ ರೈ ಮುಗರೋಡಿ, ನಾರಾಯಣ ರೈ ಬೊಳ್ಳರಗುರಿ, ವೈಕುಂಠಪುರ ಕಾಡ್ಲದ ಹಿರಿಯರಾದ ಲಿಂಗಪ್ಪ ಪೂಜಾರಿ, ಬಲ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರವಿಚಂದ್ರ ಸಾಜ ಭಾಗವಹಿಸಲಿದ್ದಾರೆ.
ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ ಗೌರವಾಧ್ಯಕ್ಷರಾದ ವಾಸಪ್ಪ ಗೌಡ ಸರೋಳಿಕಾನ, ಉದ್ಯಮಿಗಳಾದ ಶಿವರಾಮ ಆಳ್ವ, ದೈವ ನರ್ತಕರಾದ ಕುಟ್ಟಿ ನಳಿಕೆ ಕೂಟೇಲು, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ ಬಲ್ನಾಡು ಇದರ ನಿಕಟಪೂರ್ವ ಅಧ್ಯಕ್ಷರಾದ ಮಾಧವ ಗೌಡ ಕಾಂತಿಲ, ಪುತ್ತೂರು ಟೌನ್ ಬ್ಯಾಂಕ್ ನ ನಿರ್ದೇಶಕರಾದ ಕಿರಣ್ ಕುಮಾರ್ ರೈ ಬಲ್ನಾಡು, ಪ್ರಗತಿಪರ ಕೃಷಿಕರಾದ ಕೃಷ್ಣವೇಣಿ ಸಾಜ , ಕಲ್ಲಕ್ಕಿನಾಯ ವುಡ್ ಫರ್ನಿರ‍್ಸ್ & ಇಂಟಿರಿಯರ್ ಬುಳ್ಳೇರಿಕಟ್ಟೆ ಇದರ ಮಾಲಕರಾದ ಗಣೇಶ್ ಭಟ್ ಸುಧನಡ್ಕ, ಪ್ರಗತಿಪರ ಕೃಷಿಕರಾದ ಸ್ವರೂಪ ಶೆಟ್ಟಿ, ಬಲ್ನಾಡು ಪ್ರಾ.ಕೃ. ಸೇವಾ ಸಹಕಾರಿ ಸಂಘ ಇದರ ನಿರ್ದೇಶಕರಾದ ಚಂದಪ್ಪ ಪೂಜಾರಿ ಕಾಡ್ಲ, ಬಲ್ನಾಡು ಗ್ರಾಮಕರಣೀಕರಾದ ಸಂಜೀವ ನಾಯ್ಕ ಸಾಜ, ಹಾಲು ಉತ್ಪಾದಕರ ಸಹಕಾರಿ ಸಂಘ ಬಲ್ನಾಡು ಹಾಗೂ ಕೃತಕ ಗರ್ಭದಾರಕ ಇದರ ಕಾರ್ಯದರ್ಶಿ ಜನಾರ್ಧನ ಪೂಜಾರಿ ಕಾಡ್ಲ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಸೇವಾ ಪ್ರತಿನಿಧಿ ರಮೇಶ್ ಕಾಡ್ಲ ಉಜ್ರುಪಾದೆ, ಪ್ರಗತಿಪರ ಕೃಷಿಕ ಶ್ರೀಧರ ಪೂಜಾರಿ ಕಾಡ್ಲ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಬಾಲಸುಬ್ರಹ್ಮಣ್ಯ ಕೋಟ್ಯಾನ್, ವಸಂತಿ ಹರೀಶ್ ಸಾಜ, ಶೋಭ ಮುರುಂಗಿ, ವಿನಯ ವಸಂತ ಬೆಳಿಯೂರುಕಟ್ಟೆ, ಇಂದಿರಾ ಎಸ್.ರೈ, ಚಂದ್ರಾವತಿ ಪನೆತ್ತಡ್ಕ, ಗಣೇಶ್ ಬ್ರಹ್ಮರಕೋಡಿ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯೆ ವಿದ್ಯಾ ಸುರೇಶ್ ಗೌಡ ಸರೋಳಿಕಾನ, ಸಾಜ ಶಾಲೆಯ ಎಸ್.ಡಿ.ಎಂ.ಸಿ., ಅಧ್ಯಕ್ಷ ಸುದಾಕರ ನಾಯಕ್, ಮುಖ್ಯೋಪಾಧ್ಯಯರಾದ ಶಶಿಕಾಂತ್, ಎಸ್.ಡಿ.ಸಿ. ಕ್ರ‍್ಯಾಕರ‍್ಸ್ ಬಲ್ನಾಡು ಇದರ ಅಧ್ಯಕ್ಷರಾದ ಜಯಂತ್ ಸರೋಳಿಕಾನ, ಸ್ವಾಮಿ ಕೊರಗಜ್ಜ ಆರಾಧಕರಾಗಿರುವ ಹರೀಶ್ ಪೂಜಾರಿ ಅಟ್ಲಾರ್, ಸಂಜೀವ ಪೂಜಾರಿ ದೊಡ್ಡಡ್ಕ , ವಿನೋದ್ ಬೊಳಂತಿಮುಗೇರು, ಹಾಗೂ ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ ಮಾಜಿ ಅಧ್ಯಕ್ಷ ಹರ್ಷ ಕುಮಾರ್ ಕಾಡ್ಲ ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ದ.ಕ. ಲೋಕಸಭಾ ಕ್ಷೇತ್ರ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪಾಧಿಕಾರದ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ಶೆಟ್ಟಿ ಚನಿಲ, ಹಿಂದೂ ಮುಖಂಡರಾದ ಮುರಳೀಕೃಷ್ಣ ಹಸಂತ್ತಡ್ಕ, ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷರಾದ ರಾಧಕೃಷ್ಣ ಆಳ್ವ, ವಿಜಯ ಸಾಮ್ರಾಟ್ (ರಿ.) ಪುತ್ತೂರು ಇದರ ಸ್ಥಾಪಕಾಧ್ಯಕ್ಷರಾದ ಸಹಜ್ ರೈ ಬಳ್ಳಜ್ಜ, ದ.ಕ.ಜಿಲ್ಲಾ ಕಾಂಗ್ರೇಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ , ರತ್ನಶ್ರೀ ಹೊಟೇಲ್ ಮಾಲಕ ಜಯಂತ್ ಶೆಟ್ಟಿ, ಭಾ.ಜಾ.ಪಾ., ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಹಾಗೂ ಮತ್ತಿತ್ತರ ಗಣ್ಯರು ಬಾಗವಹಿಸಲಿದ್ದಾರೆ..