ಪುತ್ತೂರು: ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ಅಗ್ನಿಶಾಮಕ ದಳದ ವತಿಯಿಂದ ಬೆಂಕಿ ಅವಘಢದ ಬಗ್ಗೆ ಮುನ್ನೆಚ್ಚರಿಕೆ ಮತ್ತು ಜಾಗರೂಕತೆಯ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷ್ಯತೆ ಜು.26ರಂದು ನಡೆಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಎಸ್.ಡಿ.ಎಂ.ಸಿ. ಅಧ್ಯಕ್ಷ ಶೇಖರ್ ಪೂಜಾರಿ,ಉಪಾಧ್ಯಕ್ಷೆ ಸ್ಫೂರ್ತಿ ರೈ, ಅಗ್ನಿಶಾಮಕದಳದ ಠಾಣಾಧಿಕಾರಿ ಶಂಕರ್, ಸಿಬ್ಬಂದಿಗಳಾದ ಲೀಲಾಧರ್, ಕಾಂತರಾಜ್, ಸಚಿನ್, ವಿನೋದ್, ಮಂಜುನಾಥ ಪಾಟೀಲ್ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಎನ್. ಸ್ವಾಗತಿಸಿ, ಶಿಕ್ಷಕಿ ಪುಷ್ಪಾವತಿ ವಂದಿಸಿದರು. ಅಗ್ನಿಶಾಮಕ ಇಲಾಖೆಯ ಠಾಣಾಧಿಕಾರಿ ಶಂಕರ್ ಅಗ್ನಿ ಅವಘಡ ಉಂಟಾದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆ, ಕೈಗೊಳ್ಳಬೇಕಾದ ಜಾಗರೂಕತೆಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ನಂತರ ಅವಘಡ ಉಂಟಾದಾಗ ಅಗ್ನಿ ನಂದಿಸುವ ಪ್ರಾತ್ಯಕ್ಷತೆ ಮಾಡಿ ತೋರಿಸಿದರು.


