ನೆಲ್ಯಾಡಿ: ಜೇಸಿಐ ಮಡಂತ್ಯಾರು ಇದರ ಆತಿಥ್ಯದಲ್ಲಿ ಮಡಂತ್ಯಾರಿನಲ್ಲಿ ನಡೆದ ಮೃದಂಗ ವ್ಯವಹಾರ ಸಮ್ಮೇಳನದಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರಿಗೆ ಕೊಡಮಾಡುವ ಸಾಧನಾಶ್ರೀ ಪ್ರಶಸ್ತಿಯನ್ನು ಜೇಸಿಐ ನೆಲ್ಯಾಡಿಯ ಪೂರ್ವಾಧ್ಯಕ್ಷ ಮೋಹನ ವಿ.ಗೌಡರವರಿಗೆ ನೀಡಿ ಗೌರವಿಸಲಾಯಿತು.
ಮೋಹನ ವಿ.ಅವರು ನೆಲ್ಯಾಡಿ ಜೇಸಿಐ ಅಧ್ಯಕ್ಷರಾಗಿದ್ದ ವೇಳೆ ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಮತ್ತು ತಮ್ಮ ವ್ಯವಹಾರ ಪ್ರಗತಿಗಾಗಿ ಸಾಧನಾಶ್ರೀ ನೀಡಿ ಗೌರವಿಸಲಾಯಿತು. ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ., ಪೂರ್ವ ರಾಷ್ಟ್ರೀಯ ನಿರ್ದೇಶಕ ಸಂಪತ್ ಬಿ.ಸುವರ್ಣ ಪ್ರಶಸ್ತಿ ಪ್ರದಾನ ಮಾಡಿದರು. ನೆಲ್ಯಾಡಿ ಜೇಸಿಐ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಜೆಸಿರೆಟ್ ಅಧ್ಯಕ್ಷೆ ಪ್ರವೀಣಿ ಶೆಟ್ಟಿ, ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷರಾದ ಪುರಂದರ ಗೌಡ, ದಯಾನಂದ ಕೆ., ಮೋಹನ್ ಕುಮಾರ್ ಡಿ., ದಯಾಕರ ರೈ, ಲಕ್ಷ್ಮಣ ಜಿ., ಜಯಾನಂದ ಬಂಟ್ರಿಯಾಲ್, ಸುಚಿತ್ರಾ ಜೆ.ಬಂಟ್ರಿಯಾಲ್, ಘಟಕಾಡಳಿತ ಮಂಡಳಿ ಸದಸ್ಯರಾದ ಜಾಹ್ನವಿ, ಲೀಲಾಮೋಹನ, ಅಬ್ದುಲ್ ರಹಿಮಾನ್, ಹರೀಶ್ ರೈ, ಶ್ರೇಯಸ್ ಹಾಗೂ ಮತ್ತಿತರರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.