ಪರ್ಲಡ್ಕ ನಿವಾಸಿ, ಸಕಲೇಶಪುರ ಡ್ರೈವಿಂಗ್ ಸ್ಕೂಲ್ ಮಾಲಕ ವಸಂತ ಆಚಾರ್ಯ ಹೃದಯಾಘಾತದಿಂದ ನಿಧನ

0

ಪುತ್ತೂರು: ಸಕಲೇಶಪುರದಲ್ಲಿ ಮಂಗಳಾ ಡ್ರೈವಿಂಗ್ ಸ್ಕೂಲ್ ಮಾಲಕ, ಮೂಲತಃ ಪರ್ಲಡ್ಕ ವಸಂತ ಆಚಾರ್ಯ(61ವ.) ಜು.27ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.


ಕಳೆದ ಕೆಲ ವರ್ಷಗಳಿಂದ ಸಕಲೇಶಪುರದಲ್ಲಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಾ ಅಲ್ಲಿಯೇ ವಾಸ್ತವ್ಯವಿದ್ದರು. ಜು.27ರಂದು ಮನೆಯಲ್ಲಿ ಹೃದಯ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ದಾರಿಯಲ್ಲಿ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.


ಮೃತರು ಸಕಲೇಶಪುರದಲ್ಲಿ ಮಂಗಳಾ ಡ್ರೈವಿಂಗ್ ಸ್ಕೂಲ್ ನಡೆಸುವ ಜೊತೆಗೆ ವಿಶ್ವಕರ್ಮ ಸಮಾಜದ ಸಂಘಟನೆಯಲ್ಲೂ ಸಕ್ರೀಯರಾಗಿದ್ದರು. ಮೃತರು ಪತ್ನಿ ಮೀನಾಕ್ಷಿ, ಪುತ್ರ ನಿಕಿತ್, ಪುತ್ರಿ ನಿಶ್ಮಿತಾ, ಅಳಿಯ ರವಿ, ಇಬ್ಬರು ಮೊಮ್ಮಕ್ಕಳು, ಸಹೋದರ ಪುತ್ತೂರು ಶಮಾ ಜ್ಯುವೆಲ್ಲರ್ಸ್ ಮಾಲಕ ನಾಗೇಶ್ ಆಚಾರ್ಯ, ಸಹೋದರಿ ಲಲಿತಾ, ಭಾವಂದಿರು, ಕುಟುಂಬಸ್ಥರನ್ನು ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here