ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಶ್ರೀ ನಾಗಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಕ್ಷೀರಾಭಿಷೇಕ, ತಂಬಿಲ ಸೇವೆ ಜು 29ರಂದು ನಡೆಯಿತು. ಅರ್ಚಕ ವೆಂಕಟಕೃಷ್ಣ ಭಟ್ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮಪಾಲ ಗೌಡ ಕರಂದ್ಲಾಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಚಾರ್ವಾಕ ಜೋಡು ದೈವಗಳ ಆಡಳಿತದಾರ ಕುಸುಮಾಧರ ರೈ ಕಾಸ್ಪಡಿಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪದ್ಮನಾಭ ಗೌಡ ಪೊನ್ನೆತ್ತಡಿ, ಪದ್ಮಾವತಿ ಪುದ್ದೋಟ್ಟುಬೈಲು, ಮಾರಪ್ಪ ಶೆಟ್ಟಿ ದೋಳ್ಪಾಡಿ, ಪುಷ್ಪರಾಜ್ ಕಲಾಯಿ, ಹಾಗೂ ಜತ್ತಪ್ಪ ಗೌಡ ಗಾಳಿಬೆಟ್ಟು, ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ವಸಂತ ಪೂಜಾರಿ ದಲಾರಿ, ನಾರ್ಣಪ್ಪ ಗೌಡ ಜತ್ತೋಡಿ, ವಿಶ್ವನಾಥ ದೇವಿನಗರ, ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಆಡಳಿತ ಪಂಗಡ ಅಧ್ಯಕ್ಷ ಸುಂದರ ಗೌಡ ಕೀಲೆ, ಕಾರ್ಯದರ್ಶಿ ವಿಶ್ವನಾಥ ಕಾಂಚನ ಹಾಗೂ ಪಂಗಡ ಸದಸ್ಯರುಗಳು, ಭಕ್ತರು ಉಪಸ್ಥಿತರಿದ್ದರು.