ಕಾಣಿಯೂರು: ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆ 27ರಂದು ಪುಣ್ಚತ್ತಾರು ಶ್ರೀಹರಿ ಸಭಾಭವನದಲ್ಲಿ ನಡೆಯಲಿರುವ 8ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಪುಣ್ಚತ್ತಾರು ಶ್ರೀಹರಿ ಸಭಾಭವನದಲ್ಲಿ ಜು.29ರಂದು ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ರೈ ಮಾಳ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಪುಣ್ಚತ್ತಾರು ಶ್ರೀ ಭಜನಾ ಮಂಡಳಿ ಗೌರವಾಧ್ಯಕ್ಷ ನಾರಾಯಣ ಗೌಡ ಪುಣ್ಚತ್ತಾರು, ಗಣೇಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ದಿನೇಶ್ ಪೈಕ, ಅನಂತಕುಮಾರ್ ಬೈಲಂಗಡಿ, ಮಾಧವ ಕಲ್ಪಡ, ಅಶ್ವಿನ್ ಕರಿಮಜಲು, ಜಯರಾಮ ನಳಿಯಾರು, ಅಭಿಷೇಕ್ ಬೀರುಕುಡಿಕೆ, ಸುಂದರ ಗೌಡ ಎನ್. ಎಸ್, ರಮೇಶ್ ಉಪ್ಪಡ್ಕ, ಅಮರನಾಥ್ ಮಾಳ, ಲಕ್ಷ್ಮಣ ಗೌಡ ಪುಣ್ಚತ್ತಾರು, ಶಿವಾನಂದ ಪುಣ್ಚತ್ತಾರು, ಸುರೇಶ್ ಬೆದ್ರಂಗಳ, ಮಾಯಿಲಪ್ಪ ಬೆದ್ರಂಗಳ, ದುಗ್ಗಪ್ಪ ಪಾಲಾತ್ತಡ್ಕ, ತಿಮ್ಮಪ್ಪ ಉಪ್ಪಡ್ಕ, ಜನಾರ್ದನ ಆಚಾರ್ಯ ಅಬ್ಬಡ, ರೇವತಿ ಬೀರ್ನೆಲು, ಭಾಗೀರಥಿ ಬೀರ್ನೆಲು, ಗಿರಿಜಾ ಬೀರ್ನೆಲು, ಲಲಿತಾ ಉಪ್ಪಡ್ಕ, ಬಾಲಕ್ಕಿ ಉಪ್ಪಡ್ಕ, ಶೀಲಾವತಿ ಬೀರುಕುಡಿಕೆ, ಮಮತಾ ಉಪ್ಪಡ್ಕ, ಗೀತಾ ಬೀರುಕುಡಿಕೆ, ಮೇದಪ್ಪ ಗೌಡ ಪುಣ್ಚತ್ತಾರು, ಸುಂದರ ಉಪ್ಪಡ್ಕ, ರಾಕೇಶ್ ಕರಿಮಜಲು, ದಿವಾಕರ ಎನ್ ಎಸ್ ಪುಣ್ಚತ್ತಾರು, ಅಭಿಲಾಷ್ ಬೀಜತ್ತಡ್ಕ, ಸೋಮಶೇಖರ ಅಂಬಲಾಜೆ, ಭಾಸ್ಕರ ಕೊಜಂಬೇಡಿ, ಉಮೇಶ್ ಬೀರುಕುಡಿಕೆ, ಪರಮೇಶ್ವರ ನಾಯ್ಕ ಉಪ್ಪಡ್ಕ, ಕೊರಗಪ್ಪ ಗೌಡ ಬೀರುಕುಡಿಕೆ, ಸಂದೀಪ್, ಪುಟ್ಟಣ್ಣ ಗೌಡ ಮರಕ್ಕಡ ಮತ್ತಿತರರು ಉಪಸ್ಥಿತರಿದ್ದರು. ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಗೌಡ ಪುಣ್ಚತ್ತಾರು ಸ್ವಾಗತಿಸಿ, ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ ವಂದಿಸಿದರು.