ಉಪ್ಪಿನಂಗಡಿ: ಕರಾಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಾಗದೇವರಿಗೆ ನಾಗರ ಪಂಚಮಿಯ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರ ನಡೆಯಿತು.
ಶ್ರೀ ದೇವರ ಪೂಜಾ ವಿಧಿವಿಧಾನವನ್ನು ಅರ್ಚಕರಾದ ಶಶಿಕಾಂತ್ ರಾವ್ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ಜಯವಿಕ್ರಮ ಕಲ್ಲಾಪು, ತಣ್ಣೀರುಪಂತ ಸಿ.ಎ. ಬ್ಯಾಂಕ್ ಅಧ್ಯಕ್ಷ ಜಯಾನಂದ ಕಲ್ಲಾಪು, ಸುದರ್ಶನ ಕೊಲ್ಲಿ, ಜಗದೀಶ ಶೆಟ್ಟಿ ಮೈರಾ, ನವೀನ್ ಕರಾಯ, ಉಮೇಶ ಬನಾರಿ, ಜಗದೀಶ ಗೌಡ, ಜಯರಾಮ ಆಚಾರ್ಯ, ಅಶೋಕ ಭಟ್, ಜನಾರ್ಧನ ಗೌಡ, ವಿಶ್ವನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
