ಪುತ್ತೂರು: ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರು ಮತ್ತು ಬನ್ನೂರು ಸ್ಪೂರ್ತಿ ಯುವಕ ಮಂಡಲದ ಸಂಚಾಲಕ ದಿನೇಶ್ ಸಾಲಿಯಾನ್ ಅವರ ತಂದೆ ಸಂಜೀವ ಪೂಜಾರಿ (85ವ)ರವರು ಜು.30ರಂದು ನಿಧನರಾದರು.
ಸಂಜೀವ ಪೂಜಾರಿ ಅವರು ಪ್ರಗತಿಪರಕೃಷಿಕರಾಗಿದ್ದು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ ಮೋನಮ್ಮ, ಪುತ್ರ ದಿನೇಶ್ ಸಾಲಿಯಾನ್, ನಾಲ್ವರು ಪುತ್ರಿಯರು, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.