ಬಡಗನ್ನೂರು: ಬಡಗನ್ನೂರು ಗ್ರಾಮ ಪಂಚಾಯತ್ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಕೇಂದ್ರ ಹಾಗೂ ಹಣಕಾಸು ಯೋಜನೆಯ 2025-26ನೇ ಸಾಲಿನ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಜು.30 ರಂದು ಪುತ್ತೂರು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ಯವರ ಸಭಾಧ್ಯಕ್ಷತೆಯಲ್ಲಿ ಗ್ರಾಪಂ ಕಛೇರಿ ಸಭಾಂಗಣದಲ್ಲಿ ನಡೆಯಿತು.

ನರೇಗಾದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸೌಮ್ಯ ಅಣ್ಣಪ್ಪ ನಾಯ್ಕ ರಾಜ್ಯ ಮತ್ತು ಕೇಂದ್ರ ಹಣಕಾಸು ಯೋಜನೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರು ಉದ್ಯೋಗ ಖಾತರಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದ ಅವರು ಬಡಗನ್ನೂರು ಗ್ರಾಪಂನಿಂದ ಉದ್ಯೋಗ ಖಾತರಿಯಲ್ಲಿ ಉತ್ತಮ ರೀತಿಯಲ್ಲಿ ಕೆಲಸಗಳು ಆಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ ಅವರು ಉದ್ಯೋಗ ಖಾತರಿಗೆ ಸರಕಾರ ಕೆಲವೊಂದು ನೀತಿ ನಿಯಮಗಳನ್ನು ಅಳವಡಿಸಿದ್ದು ಅದರಂತೆ ನಾವು ಮುಂದುವರಿಯಬೇಕಾಗಿದೆ. ಪ್ರತಿಯೊಬ್ಬರು ಉದ್ಯೋಗ ಚೀಟಿ ಮಾಡಿಕೊಳ್ಳುವ ಮೂಲಕ ಉದ್ಯೋಗ ಖಾತರಿಯ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ತಾಲೂಕು ತಾಂತ್ರಿಕ ಸಂಯೋಜಕಿ ಆಕಾಂಕ್ಷ ರವರು ಉದ್ಯೋಗ ಖಾತರಿಯಲ್ಲಿ ಅಳವಡಿಸಿಕೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಅಡಿಕೆ ಹೊಂಡ ಸಮರ್ಪಕವಾಗಿ ರಚನೆ ಮಾಡಿದಾದರೆ ಸರಾಸರಿ ಒಂದು ಹೊಂಡಕ್ಕೆ 200 ರೂಪಾಯಿ ಪಾವತಿಯಾಗುತ್ತದೆ. ಜೊತೆಗೆ ಒಳ್ಳೆಮೆಣಸು, ರಬೂಟನ್, ಕಾಫಿ ಮತ್ತು ನೆರಳು ನೀಡುವ ಸಿಲ್ವರ್ ಇತ್ಯಾದಿ ಬೆಳೆಯಲು ಉದ್ಯೋಗ ಖಾತರಿ ಯೋಜನೆಯಲ್ಲಿ ಅವಕಾಶ ವಿದೆ ಹೊಸದಾಗಿ ಅರ್ಜಿ ಸಲ್ಲಿಸಿದ ಉದ್ಯೋಗ ಚೀಟಿದಾರರಿಗೆ ಅರ್ಧದಲ್ಲಿ ಸೇರಿಸಲು ಅವಕಾಶ ಇರುವುದಿಲ್ಲ. ಅರ್ಜಿ ಸಲ್ಲಿಸಿ ಇಡಬಹುದು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಡಿಸೆಂಬರ್ ತಿಂಗಳಲ್ಲಿ ಪಂಚಾಯತಿಗೆ ನೀಡಬೇಕು. ಬಳಿಕ ಕ್ರಿಯಾಯೋಜನೆ ತಯಾರಿಸಿ ಆರ್ಥಿಕ ವರ್ಷದಿಂದ ಕಾಮಗಾರಿ ಪ್ರಾರಂಭಿಸಲು ಅವಕಾಶವಿದೆ. ಕಾಮಗಾರಿ ಆರಂಭದ ಮೊದಲು ಪಂಚಾಯತಿಗೆ ತಿಳಿಸಿ ಬಳಿಕ ಕಾಮಗಾರಿ ಆರಂಭಿಸಬೇಕಾಗುತ್ತದೆ ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ಮಾತನಾಡಿ, ಸರಕಾರದ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಬೇಕು ಮತ್ತು ಪಾರದರ್ಶಕವಾಗಿ ಇರಬೇಕು ಆನುವ ದೃಷ್ಟಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯನ್ನು ಕರೆಯಲಾಗುತ್ತದೆ. ನಾವು ಸರಕಾರದ ಕಾನೂನು ನೀತಿ ನಿಯಮಗಳಂತೆ ಕಾಮಗಾರಿಗಳನ್ನು ನಡೆಸಬೇಕಾಗುತ್ತದೆ. ಸರಕಾರ ಕೇಳುವ ದಾಖಲೆಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಮತ್ತು ಒಂದೇ ಪ್ರದೇಶದಲ್ಲಿ ಮತ್ತೆ ಮತ್ತೆ ಕಾಮಗಾರಿ ನಡೆಸುವುದು ಇದಕ್ಕೆ ಗ್ರಾಮಸ್ಥರು ಆಸ್ಪದ ಕೊಡಬಾರದು, ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೂ ಸರಕಾರ ಕೇಳುವ ಸೂಕ್ತ ದಾಖಲೆಗಳನ್ನು ಒದಗಿಸುವ ಮತ್ತು ಸೂಕ್ತ ಪ್ರದೇಶದಲ್ಲಿ ಕಾಮಗಾರಿ ನಡೆಸುವ ಕರ್ತವ್ಯ ನಮ್ಮದಾಗಿದೆ ಎಂದ ಅವರು ಅಡಿಕೆ ಬೆಳೆ ಜತೆಗೆ ತಾಳೆ ಇನ್ನಿತರ ಉಪಬೆಳೆಗಳನ್ನು ಬೆಳೆಸಿಕೊಂಡು ಜೀವನ ವೃದ್ಧಿಗೊಳಿಸುವಂತೆ ಹೇಳಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಶೀಲ ಪಕ್ಯೂಡ್ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಬಿ.ಸಿ ಸುಬ್ಬಯ್ಯ ರವರು ಉದ್ಯೋಗ ಖಾತರಿಯಲ್ಲಿ ಹಿಂದೆ ನಡೆದ ಕಾಮಗಾರಿಗಳ ಬಗ್ಗೆ ತಿಳಿಸಿ, ಸ್ವಾಗತಿಸಿ, ವಂದಿಸಿದರು. ಸಾಮಾಜಿಕ ಪರಿಶೋಧನೆಯ ತಂಡದ ಕುಮಾರ್ ಮತ್ತು ಚಂಚಲಾ ವರದಿ ವಾಚಿಸಿದರು. ಕಾರ್ತಿಕ್, ವಿದ್ಯಾ ಮತ್ತು ಗ್ರಾ.ಪಂ ಸಿಬ್ಬಂದಿಗಳು ಸಹಕರಿಸಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ಸಂತೋಷ ಆಳ್ವ ಗಿರಿಮನೆ, ಕುಮಾರ ಅಂಬಟೆಮೂಲೆ, ರವಿಚಂದ್ರ ಸಾರೆಪ್ಪಾಡಿ, ಲಿಂಗಪ್ಪ ಮೋಡಿಕೆ, ವೆಂಕಟೇಶ್ ಕನ್ನಡ್ಕ, ದಮಯಂತಿ ಕೆಮನಡ್ಡ, ಹಾಗೂ ಸದಸ್ಯರುಗಳು, ನರೇಗಾ ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ನರೇಗಾ 125 ಕಾಮಗಾರಿ, 5,225 ಮಾನವ ದಿನ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಬಡಗನ್ನೂರು ಗ್ರಾಪಂನಿಂದ 125 ಕಾಮಗಾರಿಗಳು ನಡೆದಿದ್ದು ಒಟ್ಟು5,225 ಮಾನವ ದಿನದ ಕೆಲಸ ಆಗಿರುತ್ತದೆ. ರೂ.18,23,525 ಕೂಲಿ ವೆಚ್ಚ, ರೂ.4,63,775 ಸಾಮಾಗ್ರಿ ವೆಚ್ಚ ಸೇರಿ ಒಟ್ಟು ರೂ.22,87,300 ಆಗಿರುತ್ತದೆ.
15 ಮತ್ತು ರಾಜ್ಯ ಹಣಕಾಸು ಯೋಜನೆಯ ಕಾಮಗಾರಿಗಳು
15 ನೇ ಹಣಕಾಸು ಯೋಜನೆಯಲ್ಲಿ ಬಡಗನ್ನೂರು ಗ್ರಾಪಂನಲ್ಲಿ 2022-23ನೇ ಅವಧಿಯಲ್ಲಿ ಅನುಷ್ಠಾನವಾದ ಕಾಮಗಾರಿಗಳು 17 ಆಗಿದ್ದು ವೆಚ್ಚ ಅಂದಾಜು ರೂ.818066 ಆಗಿರುತ್ತದೆ.