ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಮತ್ತು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಪುತ್ತೂರು ಇದರ ಸಹಯೋಗದೊಂದಿಗೆ ನಿರಂತರ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆ.1 ರಂದು ಬೊಳ್ವಾರು ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಜರಗಿತು.

ರಕ್ತದೊತ್ತಡ, ಬಿ.ಪಿ ಪರೀಕ್ಷೆ, ಮಧುಮೇಹ, ಸಕ್ಕರೆ ಕಾಯಿಲೆ ತಪಾಸಣೆ, ಬಂಜೆತನ ತಪಾಸಣೆ ಹಾಗೂ ಮಾಹಿತಿ, ಅಸ್ತಮಾ,  ಇಸಿಜಿ, ಸೇವ್ ಹಾರ್ಟ್ ಪರೀಕ್ಷೆ, ಶ್ವಾಸಕೋಶ, ಥೈರಾಯಿಡ್, ಲಿವರ್ ಫೈಬ್ರೋಸ್ಕ್ಯಾನ್, ಮೂಳೆ ಸಾಂದ್ರತೆ ತಪಾಸಣೆ, ಕೊಬ್ಬಿನಾಂಶ ತಪಾಸಣೆಗಾಗಿ ಲಿಪಿಡ್ ಪ್ರೊಫೈಲ್, ಸ್ತನ ಕಾಯಿಲೆ ತಪಾಸಣೆ, ನರಸೂಕ್ಷ್ಮತೆ ಪರೀಕ್ಷೆ  ಮತ್ತು ಮಕ್ಕಳ ಆರೋಗ್ಯ ತಪಾಸಣೆ ನಡೆಯಿತು.

ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ., ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಗುರುರಾಜ್ ಕೊಳತ್ತಾಯ, ಸದಸ್ಯ ಲೋವಲ್ ಮೇವಡ, ಪ್ರಗತಿ ಪ್ಯಾರಾ ಮೆಡಿಕಲ್ ಮುಖ್ಯಸ್ಥೆ ಪ್ರೀತಾ ಹೆಗ್ಡೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಾಲ್ ಪತ್ ಲ್ಯಾಬ್, ಝೈಡಸ್, ಐವಿಎಫ್, ಸಿಪ್ಲಾ, ಅಕುಮಿಂಟ್ಸ್, ಅಪೆಥೆರೊ, ಅಕ್ಸೆಸಿಸ್ ಕಂಪೆನಿಯ ಸಿಬ್ಬಂದಿಗಳು ಹಾಗೂ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿಗಳು ಸಹಕರಿಸಿದರು.

ಹೆಚ್ಚಿನ ಮಾಹಿತಿಗಾಗಿ 9483127777, 9448126326, 9483787876 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಗುರುರಾಜ್ ಕೊಳತ್ತಾಯ ಹಾಗೂ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here