ಆರ್ಯಾಪು ಗ್ರಾ.ಪಂ. ಸದಸ್ಯ ಸುಬ್ರಹ್ಮಣ್ಯ ಬಲ್ಯಾಯರಿಂದ ಧನಸಹಾಯ

0

ಪುತ್ತೂರು: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುರಿಯ ಗ್ರಾಮದ ಅಜಲಾಡಿ ನಿವಾಸಿಯಾದ ಝೀನತ್‌ ರವರ ಮನೆಗೆ ಭಾಗಶಃ ಹಾನಿಯಾಗಿದ್ದು, ಈ ಬಗ್ಗೆ ಮಾಹಿತಿ ಅರಿತ ಆರ್ಯಾಪು ಗ್ರಾಮ ಪಂಚಾಯತ್‌ ಸದಸ್ಯರು, ದೊಡ್ಡಡ್ಕ ಷಣ್ಮುಖ ಜ್ಯೋತಿಷ್ಯಾಲಯದ ಜ್ಯೋತಿಷ್ಯರಾದ ಸುಬ್ರಹ್ಮಣ್ಯ ಬಲ್ಯಾಯರವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಬಳಿಕ ತಮಗೆ ಗ್ರಾಮ ಪಂಚಾಯತ್ ನಲ್ಲಿ ಲಭಿಸಿರುವ ಎರಡು ತಿಂಗಳ ಗೌರಧನದ ಮೊತ್ತವನ್ನು ಸಹಾಯಧನವಾಗಿ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಅದೇ ವಾರ್ಡ್ ಸದಸ್ಯರಾದ ಯಾಕುಬ್‌ ಕುರಿಯ, ಪ್ರಮುಖರಾದ ಕಿಶೋರ್‌ ಕುಮಾರ್‌ ದೊಡ್ಡಡ್ಕ, ಮೊಹಮ್ಮದ್‌ ಖಲಂದರ್‌ ಕಟ್ಟತ್ತಾರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here