ಪುತ್ತೂರು: ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ 2024 ನೇ ಸಾಲಿನಲ್ಲಿ ನಡೆಸಿರುವ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಪುತ್ತೂರು ವೈಷ್ಣವಿ ನಾಟ್ಯಾಲಯದ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ.
ಅಭಿಜ್ಞ 71 ಶೇಕಡ ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಬಾಯಂಬಡಿಯ ಅಣ್ಣಿ ಪೂಜಾರಿ ಹಾಗೂ ರೇವತಿ ದಂಪತಿಗಳ ಪುತ್ರಿಯಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ಸ್ನಾತಕೋತ್ತರ ಪದವೀಧರೆ.
ಪ್ರಣಿತ ಪ್ರಭು ವಿದ್ವತ್ ಅಂತಿಮ ಪರೀಕ್ಷೆಯಲ್ಲಿ 63. 16% ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಜನಾರ್ಧನ ಪ್ರಭು ಬಾಯಾರು ಹಾಗೂ ಪುಷ್ಪ ದಂಪತಿಗಳ ಪುತ್ರಿ.ಈಕೆ ಬಿಕಾಂ ಪದವೀಧರೆ.
ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಭಾರ್ಗವಿ ಬಾಯಾರು 82.5% ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಶ್ರೀನಿವಾಸ್ ಯುನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿ ಮುಕ್ಕ ಇಲ್ಲಿ ತೃತೀಯ ವರ್ಷದ ಬಿ ಟೆಕ್ ವಿದ್ಯಾರ್ಥಿನಿ. ಈಕೆ ಬಾಯಾರಿನ ಯಕ್ಷಗಾನ ಕಲಾವಿದರಾದ ಶಿವಪ್ಪ ಜೋಗಿ ಹಾಗೂ ಕುಸುಮ ದಂಪತಿಗಳ ಪುತ್ರಿ.
ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಅಂಕಿತ ಕಾವಿನ ಮೂಲೆ ಶೇಕಡ 70.66 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಇವರು ಕೇಶವ್ ಮೂರ್ತಿ ಕಾವಿನ ಮೂಲೆ ಹಾಗೂ ಪ್ರಭ ಪಾರ್ವತಿ ದಂಪತಿಗಳ ಪುತ್ರಿ.ಪ್ರಸ್ತುತ ಸಂತ ಜೋಸೆಫ್ ಯೂನಿವರ್ಸಿಟಿ ಬೆಂಗಳೂರು ಇಲ್ಲಿ ಪ್ರಥಮ ವರ್ಷದ ಎಂ ಎಸ್ ಸಿ ಮೈಕ್ರೋ ಬಯಾಲಜಿ ಅಧ್ಯಯನ ನಡೆಸುತ್ತಿದ್ದಾರೆ. ಈ ನಾಲ್ವರು ವಿದ್ಯಾರ್ಥಿನಿಯರು ವೈಷ್ಣವಿ ನಾಟ್ಯಾಲಯದ ಗುರು ವಿದುಷಿ ಯೋಗಿಶ್ವರಿ ಜಯಪ್ರಕಾಶ್ ಇವರ ಶಿಷ್ಯೆಯರಾಗಿರುತ್ತಾರೆ.