ಪುತ್ತೂರು: ಸಂಪೂರ್ಣ ಜನ ಸುರಕ್ಷಾ ಅಭಿಯಾನ ಬಜತ್ತೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಾರ್ಯಕ್ರಮ ಆ.1ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ವಹಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆನರಾಬ್ಯಾಂಕ್ ವೃತ್ತ ಕಛೇರಿಯ D.G.M ಶ್ರೀಶೈಲೇಂದ್ರನಾಥ ಶೀಥ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಪುತ್ತೂರು ಪ್ರಾದೇಶಿಕ ಕಚೇರಿ ಕೆನರಾ ಬ್ಯಾಂಕ್ A.G.M ರಂಜನ್ ಕುಮಾರ್ , ಮಂಗಳೂರು ಲೀಡ್ ಬ್ಯಾಂಕಿನ ವ್ಯವಸ್ಥಾಪಕಿ ಕವಿತಾ ಶೆಟ್ಟಿ ,ಬಜತ್ತೂರು ಗ್ರಾಮದಲ್ಲಿ 100% ವಿಮೆ ನೊಂದಾವಣೆ ಆಗಬೇಕಾಗಿದೆ ಎಂದು ತಿಳಿಸಿದರು.
ಪುತ್ತೂರು ಮತ್ತು ಕಡಲ ತಾಲೂಕು ಅಮೂಲ್ಯ ಸಾಕ್ಷರತಾ ಕೇಂದ್ರದ ಆರ್ಥಿಕ ಆಪ್ತ ಸಮಾಲೋಚಕಿ ಗೀತಾ ವಿಜಯ್ ಸಂಪೂರ್ಣ ಜನ ಸುರಕ್ಷಾ ಅಭಿಯಾನದ ಬಗ್ಗೆ ಕೇಂದ್ರ ಸರಕಾರದ ಯೋಜನೆ ಹಾಗೂ ಬ್ಯಾಂಕಿನ ಸೌಲಭ್ಯಗಳ ವಿವರವಾದ ಮಾಹಿತಿಯನ್ನು ತಿಳಿಸಿದರು.
ಪುತ್ತೂರು ಪ್ರಾದೇಶಿಕ ಕಚೇರಿ ಡಿವಿಜನಲ್ ಮ್ಯಾನೇಜರ್ ಅಜಿತ್ ಕುಮಾರ್ ಇವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಬಜತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಮೂಲ್ಯ ಸಾಕ್ಷರತಾ ಕೇಂದ್ರದ ಕೌನ್ಸಿಲರ್ ಗೀತಾ ವಿಜಯ್ ಸ್ವಾಗತಿಸಿದರು. ಗೀತಾ ಸಿ. ಎಫ್.ಎಲ್ ವಂದಿಸಿದರು. ಪುತ್ತೂರು ನಿರ್ವಹಣ ಘಟಕ ತಾಲೂಕು ಅಭಿಯಾನ ವ್ಯವಸ್ಥಾಪಕಿ ನಳಿನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಸಿಬ್ಬಂದಿಗಳಾದ ಹರೀಶ್ ಕುಮಾರ್ , ಅರನ ಬ್ ರಾಯ್ , ಉಪ್ಪಿನಂಗಡಿ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಸಿಬ್ಬಂದಿಗಳು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.