ಡ್ರೆಸ್ಸಿಂಗ್‌ಗೆ ಬಂದ ಗಾಯಾಳುವನ್ನು ನಿಂದಿಸಿದ ಆರೋಪ : ವೈದ್ಯರನ್ನು ಪ್ರಶ್ನಿಸಲೆಂದು ಆಸ್ಪತ್ರೆಯ ಮುಂದೆ ಜಮಾಯಿಸಿದ ಮನೆ ಮಂದಿ

0

ಪುತ್ತೂರು: ಬಾಲಕನೋರ್ವ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದುಕೊಂಡು ಬಳಿಕ ಡ್ರೆಸ್ಸಿಂಗ್‌ಗೆ ಆಸ್ಪತ್ರೆಗೆ ಬಂದಾಗ ವೈದ್ಯರು ನಿಂದಿಸಿದ್ದಾರೆಂದು ಆರೋಪಿಸಿದ ಮತ್ತು ಈ ಕುರಿತು ವೈದ್ಯರನ್ನು ಪ್ರಶ್ನಿಸಲು ಮನೆ ಮಂದಿ ಆಸ್ಪತ್ರೆಯ ಮುಂದೆ ಜಮಾಯಿಸಿದ ಘಟನೆ ಆ.5ರಂದು ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.


ಸ್ವರ್ಣೋದ್ಯಮಿಯೊಬ್ಬರ ಮಗ 15 ವರ್ಷದ ಬಾಲಕ ಕೆಲವು ದಿನಗಳ ಹಿಂದೆ ಬಿದ್ದು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಅದೇ ಆಸ್ಪತ್ರೆಗೆ ಡ್ರೆಸ್ಸಿಂಗ್‌ಗೆಂದು ಬಂದಾಗ ವೈದ್ಯರಲ್ಲಿ ಗಾಯವಾದ ಜಾಗದಲ್ಲಿ ಬ್ಲೀಡಿಂಗ್ ಆಗುತ್ತಿದೆ ಎಂದು ಹೇಳಿದ್ದಾರೆನ್ನಲಾಗಿದೆ. ಈ ಕುರಿತು ವೈದ್ಯರು ಕೂಡಾ ಗಾಯವಾದಾಗ ಬ್ಲೀಡಿಂಗ್ ಅಲ್ಲದೆ ಬೇರೇನು ಬರುವುದಿಲ್ಲ ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಈ ನಡುವೆ ವೈದ್ಯರು ಪಾನಮತ್ತರಾಗಿ ತನ್ನನ್ನು ನಿಂದಿಸಿದ್ದಾರೆಂದು ಆರೋಪಿಸಲಾಗಿದ್ದು, ಮನೆಯವರು ವೈದ್ಯರನ್ನು ಪ್ರಶ್ನಿಸಲು ಆಸ್ಪತ್ರೆಯ ಮುಂದೆ ಜಮಾಯಿಸಿದರು. ಘಟನಾ ಸ್ಥಳಕ್ಕೆ ಪೊಲೀಸರು ಕೂಡಾ ತೆರಳಿದ್ದಾರೆ. ಈ ನಡುವೆ ಬಾಲಕ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ಕೂಡಾ ಹೋಗಿದ್ದರು. ಇತ್ತ ಕಡೆ ವೈದ್ಯರು ಕೂಡಾ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರು ನೀಡಲು ಮುಂದಾಗಿದ್ದರು. ಕೊನೆಗೆ ವೈದ್ಯರು ಮತ್ತು ಮನೆ ಮಂದಿ ಮಾತುಕತೆ ನಡೆಸಿ ರಾಜಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here