ಕಡಬ ಪಟ್ಟಣ ಪಂಚಾಯತ್‌ ಚುನಾವಣೆ : 13 ವಾರ್ಡ್‌ಗಳಿಗೆ 46 ನಾಮಪತ್ರ ಸಲ್ಲಿಕೆ

0

ಬಿಜೆಪಿ-13, ಕಾಂಗ್ರೆಸ್-24, ಎಸ್.ಡಿ.ಪಿ.ಐ.-3, ಪಕ್ಷೇತರ-3, ಎ.ಎ.ಪಿ. 2, ಐ.ಯು.ಎಂ.ಎಲ್.1

ಕಡಬ: ಇಲ್ಲಿನ ಪಟ್ಟಣ ಪಂಚಾಯತ್‌ನ 13 ವಾರ್ಡ್‌ಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.5 ಕಡೆಯ ದಿನವಾಗಿದ್ದು, ವಿವಿಧ ಪಕ್ಷಗಳಿಂದ ಒಟ್ಟು 46 ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿಯಿಂದ 13, ಕಾಂಗ್ರೆಸ್ ಪಕ್ಷದಿಂದ 24, ಎಸ್.ಡಿ.ಪಿ.ಐ.ಯಿಂದ 3, ಪಕ್ಷೇತರ ಅಭ್ಯರ್ಥಿಗಳು 3, ಎ.ಎ.ಪಿ.ಯಿಂದ 2 ಹಾಗೂ ಐ.ಯು.ಎಂ.ಎಲ್. ಪಕ್ಷದಿಂದ 1 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಒಟ್ಟು 46 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.


ಆ.4ರವರೆಗೆ ಒಟ್ಟು 22 ನಾಮಪತ್ರ ಸಲ್ಲಿಕೆಯಾಗಿದ್ದು ಆ.5ರ ಕೊನೆಯ ದಿನದಂದು ವಿವಿಧ ಪಕ್ಷಗಳಿಂದ ಒಟ್ಟು 24 ನಾಮಪತ್ರ ಸಲ್ಲಿಕೆಯಾಗಿದೆ. ಆ.5ರಂದು ಕಾಂಗ್ರೆಸ್ ಪಕ್ಷದಿಂದ 19 ಅಭ್ಯರ್ಥಿಗಳು, ಪಕ್ಷೇತರರು ಮೂರು ವಾರ್ಡ್‌ಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಓರ್ವ ಅಭ್ಯರ್ಥಿ ಹಾಗೂ ಐ.ಯು.ಎಂ.ಎಲ್. ಪಕ್ಷದಿಂದ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಪಟ್ಟಣ ಪಂಚಾಯತ್‌ನ ಕಳಾರ 1ನೇ ವಾರ್ಡ್‌ನ ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ತಮನ್ನಾಜಬೀನ್, ಪಕ್ಷೇತರ ಅಭ್ಯರ್ಥಿಯಾಗಿ ಜೈನಾಬಿ, ವಾರ್ಡ್ ಸಂಖ್ಯೆ 3. ಪನ್ಯ ಸಾಮಾನ್ಯ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮಹಮ್ಮದ್ ಪೈಝಲ್ ಹಾಗೂ ಮಹಮ್ಮದ್ ಶರೀಫ್, ಐ.ಯು.ಎಂ.ಎಲ್. ಪಕ್ಷದಿಂದ ಕೆ. ಅಬ್ದುಲ್ ರಝಾಕ್, ವಾರ್ಡ್ ಸಂಖ್ಯೆ 4 ಬೆದ್ರಾಜೆ ಸಾಮಾನ್ಯ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸಿ.ಜೆ.ಸೈಮನ್ ಹಾಗೂ ರಶೀದ್, ಪಕ್ಷೇತರ ಅಭ್ಯರ್ಥಿಯಾಗಿ ಇಲ್ಯಾಸ್ ಎಂ., ಎ.ಎ.ಪಿ.ಯಿಂದ ಮಹಮ್ಮದ್ ಝಾಹಿದ್ ಎಚ್., ವಾರ್ಡ್ ಸಂಖ್ಯೆ 5. ಮಾಲೇಶ್ವರ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಮೊದಿನ್, ವಾರ್ಡ್ ಸಂಖ್ಯೆ 6 ಕಡಬ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ನೀಲಾವತಿ ಶಿವರಾಮ್ ಹಾಗೂ ವಾರಿಜ, ಪಕ್ಷೇತರ ಅಭ್ಯರ್ಥಿಯಾಗಿ ಆಲೀಸ್ ಚಾಕೋ, ವಾರ್ಡ್ ಸಂಖ್ಯೆ 7 ಪಣೆಮಜಲು ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ರೋಹಿತ್ ಗೌಡ ಹಾಗೂ ಹರಿಪ್ರಸಾದ್, ವಾರ್ಡ್ ಸಂಖ್ಯೆ 9 ಮೂರಾಜೆ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕೃಷ್ಣಪ್ಪ ಪೂಜಾರಿ ಹಾಗೂ ಮುರಳಿ ಎಂ., ವಾರ್ಡ್ ಸಂಖ್ಯೆ 10 ದೊಡ್ಡ ಕೊಪ್ಪ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ತುಳಸಿಗಣೇಶ್ ಗೌಡ ಹಾಗೂ ಜಯಂತಿ, ವಾರ್ಡ್ ಸಂಖ್ಯೆ 11 ಕೋಡಿಂಬಾಳ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮೀನಾಕ್ಷಿ, ವಾರ್ಡ್ ಸಂಖ್ಯೆ 12. ಮಜ್ಜಾರು ಪರಿಶಿಷ್ಠ ಜಾತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಉಮೇಶ್ ಎಂ. ಮಡ್ಯಡ್ಕ ಹಾಗೂ ಬಾಬು, ವಾರ್ಡ್ ಸಂಖ್ಯೆ 13 ಪುಳ್ಳಿಕುಕ್ಕು ಪರಿಶಿಷ್ಠ ಪಂಗಡ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕೃಷ್ಣಪ್ಪ ನಾಯ್ಕ್ ಹಾಗೂ ವಿಶ್ವನಾಥರವರು ನಾಮಪತ್ರ ಸಲ್ಲಿಸಿದ್ದಾರೆ.


ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಜತೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಗಳಾಗಿ ಪ್ರಮೋದ್ ಕುಮಾರ್, ವಿಮಲ್ ಬಾಬು, ಸಹಾಯಕ ಚುನಾವಣಾಧಿಕಾರಿಗಳಾದ ಭುವನೇಂದ್ರ ಕುಮಾರ್, ಸಂದೇಶ್‌ರವರು ನಾಮಪತ್ರ ಸ್ವೀಕರಿಸಿದರು.

ಇಂದು ನಾಮಪತ್ರ ಪರಿಶೀಲನೆ
ಆ.6ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಆ.8ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿರುತ್ತದೆ. ಆ.17ರಂದು ಚುನಾವಣೆ ನಡೆಯಲಿದೆ.


ಕೊನೆಯ ದಿನದಂದು 24 ನಾಮಪತ್ರ ಸಲ್ಲಿಕೆ
ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನಾಂಕವಾಗಿದ್ದ ಆ.5ರಂದು ಒಟ್ಟು 24 ನಾಮಪತ್ರ ಸಲ್ಲಿಕೆಯಾಗಿದೆ. ಕಾಂಗ್ರೆಸ್‌ನಿಂದ 19, ಪಕ್ಷೇತರರಿಂದ 3, ಎ.ಎ.ಪಿಯಿಂದ 1 ಹಾಗೂ ಐ.ಯು.ಎಂ.ಎಲ್.ನಿಂದ 1 ನಾಮಪತ್ರ ಸಲ್ಲಿಕೆಯಾಗಿದೆ.

LEAVE A REPLY

Please enter your comment!
Please enter your name here