ಪುತ್ತೂರು: ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಇದರ ಆಶ್ರಯದಲ್ಲಿ ಆ.6 ರಂದು ಇಲ್ಲಿನ ಬಪ್ಪಳಿಗೆ ಬಳಿಯ ಸೈನಿಕ ಭವನ ಇದರ ಸಭಾಂಗಣದಲ್ಲಿ ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮವು ನಡೆಯಿತು.
ರಾಷ್ಟಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹಲವಾರು ವರ್ಷಗಳಿಂದ ಸಂಘಟನೆಯ ಮುಖೇನ ನಡೆಯುತ್ತಿರುವಂತಹ ಸಮಾಜಮುಖಿ ಕಾರ್ಯಗಳ ಬಗ್ಗೆ ವಿವರಿಸಿ ,
ಕಳೆದ ಹತ್ತು ವರುಷದಲ್ಲಿ 37 ಲಕ್ಷ ರೂಪಾಯಿಗನ್ನು ಅರ್ಹ ಸೈನಿಕ ಕುಟುಂಬದ ಸದಸ್ಯರಿಗೆ ಸಂಘಟನೆಯಿಂದ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಈ ವೇದಿಕೆಯ ಮುಖೇನ ಕಾರ್ಯಕ್ರಮ ನಿರಂತರ ಸಾಗಲಿದೆಯೆಂದು ಹೇಳಿ , ಹಾರೈಸಿದರು. ಬಳಿಕ ಸೈನಿಕ ಕುಟುಂಬದ ಸದಸ್ಯರಿಗೆ ಸಹಾಯಧನ ವಿತರಣೆ ನಡೆಯಿತು.
ಕಾರ್ಯಕ್ರದಲ್ಲಿ ಪುತ್ತೂರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಸಂತ ಕುಮಾರ್ ಹಾಗೂ ಪದಾಧಿಕಾರಿಗಳು, ರಾಷ್ಟ್ರಭಕ್ತ ನಾಗರಿಕ ವೇದಿಕೆಯಯ ಉಪಾಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಗೌರವಾಧ್ಯಕ್ಷರಾದ ಎಂ.ಕೆ.ನಾರಯಣ ಭಟ್ ,ಕಾರ್ಯದರ್ಶಿ ನಸಿಂಹ ಭಂಡಾರಿ , ಟ್ರಸ್ಟ್ ಅಧ್ಯಕ್ಷ ಜೋ ಡಿ ಸೋಜಾ , ಉದ್ಯಮಿ ಧನಂಜಯ ಪಟ್ಲ , ಅವಿನಾಶ್ ಸಹಿತ ಮಾಜಿ ಸೈನಿಕರ ಸಂಘದ ಸದಸ್ಯರು , ರಾಷ್ಟ್ರ ಭಕ್ತ ನಾಗರಿಕ ವೇದಿಕೆಯ ಪದಾಧಿಕಾರಿಗಳು , ಸದಸ್ಯರು ಹಾಗೂ ದೇಶಭಕ್ತರು ಹಾಜರಿದ್ದರು.