ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಆಟಿ ದುರ್ಗಾ ನಮಸ್ಕಾರ ಪೂಜೆ- ವಿಶೇಷ ಭಜನಾ ಕಾರ್ಯಕ್ರಮ

0

ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಆಟಿ ದುರ್ಗಾ ನಮಸ್ಕಾರ ಪೂಜೆ ಜು.25 ರಿಂದ ಆ.5ರವರೆಗೆ ನಡೆಯಿತು.

12 ದಿವಸಗಳ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ರಾತ್ರಿ ನಡೆದ ವಿಶೇಷ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಕಪಿಲೇಶ್ವರ ಭಜನಾ ಮಂಡಳಿ ಚಾರ್ವಾಕ, ಶ್ರೀ ಕಪಿಲೇಶ್ವರ ಮಹಿಳಾ ಭಜನಾ ಮಂಡಳಿ ಚಾರ್ವಾಕ, ಶ್ರೀ ಶಾರದಾಂಭ ಭಜನಾ ಮಂಡಳಿ ಕೊಪ್ಪ ಚಾರ್ವಾಕ, ಶ್ರೀ ಉಳ್ಳಾಲ್ತಿ ಭಜನಾ ಮಂಡಳಿ ನಾಲ್ಕಂಬ ಚಾರ್ವಾಕ, ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಆನಡ್ಕ, ಶ್ರೀ ಜಲದುರ್ಗಾ ಭಜನಾ ಮಂಡಳಿ ಪೆರುವಾಜೆ, ಶ್ರೀ ಸೀತಾರಾಮಾಂಜನೇಯ ಭಜನಾ ಮಂಡಳಿ ಎಣ್ಮೂರು, ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಮಲ್ಲೆಂಗಲ್ಲು ಬೆಳ್ತಂಗಡಿ, ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಕೊರಿಂಜ ಬೆಳ್ತಂಗಡಿ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆಲತ್ತಿಮಾರ್ ಬೆಳ್ತಂಗಡಿ, ಶ್ರೀ ಸಾಕ್ಷತ್ ಶಿವ ಭಜನಾ ಮಂಡಳಿ ಚಾರ್ವಾಕ, ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಊಂತನಾಜೆ ಮೊಗ್ರು ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ಧರ್ಮಪಾಲ ಗೌಡ ಕರಂದ್ಲಾಜೆ, ಚಾರ್ವಾಕ ಜೋಡುದೈವಗಳ ಕ್ಷೇತ್ರದ ಆಡಳಿತದಾರರಾದ ಕುಸುಮಾಧರ ರೈ ಕಾಸ್ಪಾಡಿಗುತ್ತು, ಅರ್ಚಕ ವೆಂಕಟಕೃಷ್ಣ ಭಟ್, ಆಡಳಿತ ಪಂಗಡದ ಅಧ್ಯಕ್ಷ ಸುಂದರ ಗೌಡ ಕೀಲೆ, ಕಾರ್ಯದರ್ಶಿ ವಿಶ್ವನಾಥ ಕಂಚನ ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here