ದರ್ಬೆ ಕಡೆಗೆ ಸಂಚರಿಸುವ ಘನ ವಾಹನಗಳ ಬದಲಿ ರಸ್ತೆ ಗಮನಿಸಿ
ಪುತ್ತೂರು: ಧನ್ವಂತರಿ ಆಸ್ಪತ್ರೆಯ ಬಳಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಬಸ್ ಮತ್ತು ಇತರ ಘನ ವಾಹನಗಳ ಮಾರ್ಗ ಬದಲಿ ರಸ್ತೆ ಬಳಸುವಂತೆ ಸೂಚನೆ ನೀಡಿದ್ದಾರೆ.
ನಗರ ಸಭಾ ವ್ಯಾಪ್ತಿಯ ದರ್ಬೆ ಧನ್ವಂತರಿ ಆಸ್ಪತ್ರೆ ಬಳಿ ರಸ್ತೆ ದುರಸ್ಥಿ ಕಾಮಗಾರಿ ನಡೆಯುತ್ತಿರುವುದರಿಂದ ಸದ್ರಿ ರಸ್ತೆಯಲ್ಲಿ ದರ್ಬೆ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಸಂಚರಿಸಲು ಎಲ್ಲ ವಾಹನಗಳಿಗೆ ಅವಕಾಶವಿದ್ದು, ಗಾಂಧಿಕಟ್ಟೆ ಕಡೆಯಿಂದ ದರ್ಬೆ ಕಡೆಗೆ ಸಂಚರಿಸುವ ಬಸ್‌ಗಳು ಹಾಗೂ ಇತರ ಘನ ವಾಹನಗಳು ಬದಲಿ ರಸ್ತೆಯಾಗಿ ಬೊಳುವಾರು-ಲಿನೇಟ್ ಜಂಕ್ಷನ್, ಅಶ್ವಿನಿ ಸರ್ಕಲ್ (ಪತ್ರಾವೋ ಸರ್ಕಲ್) ಮೂಲಕ ಕಾಮಗಾರಿ ಮುಗಿಯುವರೆಗೆ ಸಂಚರಿಸುವಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆ ಮನವಿ ಮಾಡಿದೆ.