ಆಲಂಕಾರು: ಆಲಂಕಾರು ವಲಯ ಬಂಟರ ಸಂಘ ಮತ್ತು ಯುವ ಬಂಟರ ಸಂಘ ಆಲಂಕಾರು ವಲಯ ಇದರ ಆಶ್ರಯದಲ್ಲಿ ಆಟಿದ ಕೂಟ, ಬಂಟರ ಸಮಾವೇಶ, ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ ಮತ್ತು ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಪ್ರಧಾನ, ಗ್ರಾಮೀಣ ಒಳಾಂಗಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆ.10 ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ‘ದೀನ ದಯಾಳು’ ರೈತ ಸಭಾ ಭವನದಲ್ಲಿ ನಡೆಯಲಿದೆ.
ಆಟಿದ ಕೂಟದ ಉದ್ಘಾಟನೆಯನ್ನು ಬೆಳಿಗ್ಗೆ 9 ಗಂಟೆಗೆ ಪುತ್ತೂರಿನ ಮಾಜಿ ಶಾಸಕರಾದ ಶಕುಂತಳಾ ಟಿ.ಯವರು ನೇರವೆರಸಲಿದ್ದಾರೆ. ನಂತರ ಗ್ರಾಮೀಣ ಒಳಾಂಗಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಸಭಾಕಾರ್ಯಕ್ರಮ ನಡೆಯಲಿದೆ.
ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಕೆ. ಸೇಸಪ್ಪ ರೈ ಯವರು ಸಭಾಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು (ರಿ.) ಪುತ್ತೂರು ತಾಲೂಕು ಸಮಿತಿಯ ಸಂಚಾಲಕರಾದ ದುರ್ಗಾಪ್ರಸಾದ್ ರೈ, ಬೆಳ್ತಂಗಡಿ ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಪುಷ್ಪರಾಜ ಶೆಟ್ಟಿ, ಬ್ಯಾಂಕ್ ಆಫ್ ಬರೋಡ ನಿವೃತ್ತಾಧಿಕಾರಿ ಬಾಲಚಂದ್ರ ಶೆಟ್ಟಿ ನೀರಾಜೆ,ಕೃಷಿ ಪ್ರಶಸ್ತಿ ಗೆ ಬಾಜನರಾದ ವಿಜಯ ರೈ ಮನವಳಿಕೆಯವರು ಭಾಗವಹಿಸಲಿದ್ದಾರೆ.
ಎಲ್ಲರೂ ಭಾಗವಹಿಸುವಂತೆ ಸಂಘದ ಪ್ರದಾನ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ, ಉಪಾಧ್ಯಕ್ಷರಾದ ರಾಮಮೋಹನ ರೈ ಸುರುಳಿ, ಪ್ರಭಾ ರಘುನಾಥ ಚೌಟ,ಕೋಶಾಧಿಕಾರಿ ಲೋಕನಾಥ ರೈ ರಾಮಕುಂಜ, ಸಂಘಟನಾ ಕಾರ್ಯದರ್ಶಿ ಚೆನ್ನಕೇಶವ ರೈ, ಗುತ್ತುಪಾಲು,ಜೊತೆ ಕಾರ್ಯದರ್ಶಿ ನೀರಜ್ ಕುಮಾರ್ ರೈ, ಆರುವಾರ, ಆಲಂಕಾರು ವಲಯ ಯುವಬಂಟರ ಸಂಘದ ಅಧ್ಯಕ್ಷ
ಗುರುಕಿರಣ್ ಶೆಟ್ಟಿ ಬಾಲಾಜೆ,ಕಾರ್ಯದರ್ಶಿ ಕವನ್ ರೈ ಮನವಳಿಕೆ, ಆಟಿಕೂಟದ ಸಂಚಾಲಕರಾದ ಮಮತಾ ಕೆ. ಶೆಟ್ಟಿ ಅಂಬರಾಜೆ , ಧನ್ಯಶ್ರೀ ಪಿ. ರೈ ಮನವಳಿಕೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ