ರಕ್ಷಾ ಬಂಧನ ತ್ಯಾಗದ ಸಂಕೇತ – ಸುಭಾಶ್ಚಂದ್ರ ಕಳಂಜ
ಪುತ್ತೂರು: ತಿಥಿಗಳಿಗೆ ಅನುಸಾರವಾಗಿ ಹಬ್ಬಗಳನ್ನು ಆಚರಿಸುವುದು ನಮ್ಮ ದೇಶದ ಸಂಸ್ಕೃತಿ. ಶ್ರಾವಣ ಹುಣ್ಣಿಮೆಯ ಪುಣ್ಯ ದಿನದಂದು ನಾವು ರಕ್ಷಾ ಬಂಧನವನ್ನು ಆಚರಿಸುತ್ತೇವೆ. ವಿವೇಕಾನಂದರಂತಹ ಶ್ರೇಷ್ಠ ವ್ಯಕ್ತಿಗಳ ಹೆಸರಲ್ಲಿ ನಡೆಯುತ್ತಿರುವ ಈ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ನಿಮ್ಮಂತ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು. ರಕ್ಷೆಯಲ್ಲಿ ಕೇಸರಿ ಬಣ್ಣವನ್ನು ಯಾಕೆ ಬಳಸುತ್ತೇವೆ ಎಂದರೆ ಕೇಸರಿ ತ್ಯಾಗದ ಸಂಕೇತವಾಗಿದೆ. ತ್ಯಾಗ ಮತ್ತು ಸೇವೆ ನಮ್ಮ ದೇಶದ ಆತ್ಮವಿದ್ದಂತೆ ಅದನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಮಂಗಳೂರು ವಿಭಾಗ ಸಹ ಕಾರ್ಯವಾಹರಾದ ಶ್ರೀ ಸುಭಾಶ್ಚಂದ್ರ ಕಳಂಜ ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕಮದಲ್ಲಿ ಭಾಗವಹಿಸಿ ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ರವಿನಾರಾಯಣ, ಶಾಲಾ ಮುಖ್ಯ ಗುರುಗಳಾದ ಸತೀಶ್ ಕುಮಾರ್ ರೈ, ಪ್ರಾಥಮಿಕ ವಿಭಾಗದ ಮುಖ್ಯ ಮಾತಾಜಿ ಸಂಧ್ಯಾ, ಪೂರ್ವ ಪ್ರಾಥಮಿಕ ವಿಭಾಗ ಮುಖ್ಯ ಮಾತಾಜಿ ಮಮತಾ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಹೋದರತ್ವದ ಹಾಡನ್ನು ಹಾಡಿದರು. ವಿದ್ಯಾರ್ಥಿ ಜೀವಿತ್ ಸಂಘ ಗೀತೆ ಹಾಡಿ, ದೈಹಿಕ ಶಿಕ್ಷಕರಾದ ದೀಪಕ್ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿ,ಸಿಹಿ ಹಂಚಿಕೊಂಡರು.