ಇನ್ನರ್‌ವೀಲ್ ಕ್ಲಬ್ ಪುತ್ತೂರು – ಆ.11ರಂದು ಜಿಲ್ಲಾಧ್ಯಕ್ಷರ ಭೇಟಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

0

ಪುತ್ತೂರು: ಇನ್ನರ್‌ವೀಲ್ ಕ್ಲಬ್ ಪುತ್ತೂರಿಗೆ ಆ.11ರಂದು ಬೆಳಗ್ಗೆ 11.15ಕ್ಕೆ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಅವರು ಭೇಟಿ ನೀಡಿ ರೋಟರಿ ಮನಿಷಾ ಹಾಲ್‌ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನೆಲ್ಲಿಕಟ್ಟೆಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಕಸದ ಬುಟ್ಟಿಯನ್ನು ಕೊಡುಗೆಯಾಗಿ ನೀಡುವ ಹಾಗೂ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಶಬರಿ ಕಡಿದಾಳ್ ಭಾಗಿಯಾಗಲಿದ್ದಾರೆ.


ವಿಟ್ಲ ಮೂರುಕಜೆ ಹೆಣ್ಣು ಮಕ್ಕಳ ಮೈತ್ರೈಯಿ ಗುರುಕುಲ ಸಂಸ್ಥೆಯನ್ನು ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಗೌರವಿಸುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗುರುಕುಲದ ಪ್ರತಿನಿಧಿಯಾಗಿ ಗುರುಕುಲದ ಮಾತೃ ಶ್ರೀ ಹಾಗೂ ಕಾರ್ಯಾಲಯದ ಕಾರ್ಯದರ್ಶಿಯಾಗಿರುವ ಸಾವಿತ್ರಿ ಭಗಿನಿ ಅವರು ಗೌರವ ಸ್ವೀಕರಿಸಲಿದ್ದಾರೆ. 7 ವೀಲ್ ಚಯರ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು, ಪಾಪೆಮಜಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್‌ಕೆಜಿ ಯುಕೆಜಿಗೆ ಎರಡು ಟೇಬಲ್‌ಗಳನ್ನು ವಿತರಿಸಲಾಗುತ್ತದೆ. ಮಧ್ಯಾಹ್ನ 12.30ರಿಂದ ಇನ್ನರ್ ವೀಲ್ ಸದಸ್ಯೆ ಮಧುಮಿತ ರಾವ್ ಅವರಿಂದ ವೀಣಾ ವಾದನ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here