





ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ವ್ಯಾಪ್ತಿಗೊಳಪಟ್ಟ ಸವಣೂರು, ಪುಣ್ಚಪ್ಪಾಡಿ, ಕುದ್ಮಾರು, ಬೆಳಂದೂರು ಮತ್ತು ಕಾಯಿಮಣ ಗ್ರಾಮದ ಸದಸ್ಯರ ಮನೆಯ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಮತ್ತು ಪದವಿಯಲ್ಲಿ ಶೇ.80%ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸದ್ರಿ ವಿದ್ಯಾರ್ಥಿಗಳನ್ನು ಆ.24ರಂದು ನಡೆಯುವ ಸಂಘದ ಮಹಾಸಭೆಯಲ್ಲಿ ಗೌರವಧನದೊಂದಿಗೆ ಪುರಸ್ಕರಿಸಲಾಗುವುದು. ಆದುದರಿಂದ ಆ.18ರೊಳಗೆ ಅರ್ಹ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್, ಭಾವಚಿತ್ರ ಮತ್ತು ಅಂಕಪಟ್ಟಿ ಪ್ರತಿಗಳನ್ನು ಸಂಘದ ಸವಣೂರಿನ ಪ್ರಧಾನ ಕಚೇರಿಗೆ ಸಲ್ಲಿಸಬೇಕು ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಹಾಗೂ ನಿರ್ದೇಶಕರುಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ತಿಳಿಸಿದ್ದಾರೆ.








