ಬಡಗನ್ನೂರು: ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು, ಪಟ್ಟೆ ಇದರ ಆಶ್ರಯದಲ್ಲಿ ಹಾಗೂ ಎಸ್.ಕೆ. ಫ್ರೆಂಡ್ಸ್ ಮುಡಿಪಿನಡ್ಕ ಶ್ರೀಕೃಷ್ಣ ಯುವಕಮಂಡಲ ಪಟ್ಟೆ ಶ್ರೀಕೃಷ್ಣ ಹಿರಿಯ ವಿದ್ಯಾರ್ಥಿ ಸಂಘ ಪಟ್ಟೆ ಶ್ರೀಕೃಷ್ಣ ಭಜನಾ ಮಂಡಳಿ ಮುಡಿಪಿನಡ್ಕ ಅಯ್ಯಪ್ಪ ಭಜನಾ ಮಂಡಳಿ ಪೆರಿಗೇರಿ ನವಚೈತನ್ಯ ಯುವಕಮಂಡಲ ಪೆರಿಗೇರಿ ಇವುಗಳ ಸಹಯೋಗದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ “ಶ್ರೀಕೃಷ್ಣ ಲೀಲೆ 2025-26” ಕಾರ್ಯಕ್ರಮ ಅ. 16 ಪೂರ್ವಾಹ್ನ ಗಂ 9ರಿಂದ ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಆವರಣ ನಡೆಯಲಿರುವುದು.
ಕಾರ್ಯಕ್ರಮಗಳು
ಆ.16ರಂದು ಪೂರ್ವಾಹ್ನ ಗಂ 9ರಿಂದ” ಶ್ರೀಕೃಷ್ಣಸ್ತುತಿ” (ಭಜನಾ)ಕಾರ್ಯಕ್ರಮವನ್ನು ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಪ್ರಾಕ್ತನ ಅಧ್ಯಕ್ಷ ಪಿ. ವೇಣುಗೋಪಾಲ ಭಟ್ ಚಾಲನೆ ನೀಡಲಿದ್ದಾರೆ. ಸರ್ವಶಕ್ತಿ ಮಹಿಳಾ ಭಜನಾ ಮಂಡಳಿ ಪಡುಮಲೆ, ಆದಿಶಕ್ತಿ ಮಹಿಳಾ ಭಜನಾ ಮಂಡಳಿ ಪಟ್ಟೆ (ಪಡುಮಲೆ) ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ಪೆರಿಗೇರಿ ಶ್ರೀ ವರಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಪಡುಮಲೆ, ಶ್ರೀಕೃಷ್ಣ ಮಹಿಳಾ ಭಜನಾ ಮಂಡಳಿ ಮುಡಿಪಿನಡ್ಕ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಪೂರ್ವಾಹ್ನ ಗಂ 10 ರಿಂದ “ಶ್ರೀಕೃಷ್ಣ ವೇಷ ಸ್ಪರ್ಧೆ” ಮುದ್ದು ಕೃಷ್ಣ (ವಯೋಮಾನ 3ರಿಂದ 6), ಬಾಲಕೃಷ್ಣ /ರಾಧಾಕೃಷ್ಣ (ವಯೋಮಾನ 6ರಿಂದ 10), 5ನೇ ತರಗತಿಯಿಂದ 7ನೇ ತರಗತಿ ವರೆಗೆ, ಮತ್ತು 8ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ “ಮೊಸರು ಕುಡಿಕೆ ಸ್ಪರ್ಧೆ” ನಡೆಯಲಿದೆ.
ಸಾರ್ವಜನಿಕರಿಗೆ:
ಪುರುಷರಿಗೆ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು, ಪಂದ್ಯಾಟವನ್ನು ಮುಡಿಪಿನಡ್ಕ ಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ಜಯಪ್ರಕಾಶ್ ಆಚಾರ್ಯ ಕುಡ್ಡಿಲ ಚಾಲನೆ ನೀಡಲಿದ್ದಾರೆ. ಮಾತೆಯರಿಗೆ ಹಗ್ಗಜಗ್ಗಾಟ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಗುರುಗಳಾದ ಯಮುನ ಕೆ.ಚಾಲನೆ ನೀಡಲಿದ್ದಾರೆ.
ಅಪರಾಹ್ನ ಗಂ.12ರಿಂದ ವಿದ್ವಾನ್ ದೀಪಕ್ ಕುಮಾರ್ ಬಳಗ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಶ್ರೀಕೃಷ್ಣಲೀಲಾ” ವಿಶಿಷ್ಟ ನೃತ್ಯ ಮತ್ತು ಗಾಯನ ರೂಪಕ ನಡೆಯಲಿದೆ. ಅಪರಾಹ್ನ ಗಂ 1 ರಿಂದ ಭೋಜನ, ಅಪರಾಹ್ನ ಗಂ.2 ರಿಂದ ಶ್ರೀಕೃಷ್ಣ ರಥ” ಶಾಲಾ ಆವರಣದಿಂದ ಮುಡಿಪಿನಡ್ಕ ಶ್ರೀಕೃಷ್ಣ ಭಜನಾ ಮಂದಿರದವರೆಗೆ ಮೆರವಣಿಗೆ ನಡೆಯಲಿದೆ. ಪಡುಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಗೂಡ್ಲು ರವರು ಮೆರವಣಿಗೆಗೆ ಚಾಲನೆ ನೀಡಿಡಲಿದ್ದಾರೆ.