ಅರಿಯಡ್ಕ ಗ್ರಾಮ ಪಂಚಾಯತ್ ವಿಶೇಷ ಗ್ರಾಮ ಸಭೆ

0

ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಮತ್ತು ರಾಜ್ಯ ಹಣಕಾಸು ಯೋಜನೆ 2025-26 ನೇ ಸಾಲಿನ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಆ.8ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆ ಮಜಲು, ನೋಡೆಲ್ ಅಧಿಕಾರಿ ಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪುತ್ತೂರು ಇದರ ಮೇಲ್ವಿಚಾರಕಿ ಜಲಜಾಕ್ಷಿ , ತಾಂತ್ರಿಕ ಸಂಯೋಜಕರಾದ ವಿನೋದ್ ಉಪಸ್ಥಿತರಿದ್ದರು.


ಪ್ರಮುಖ ನಿರ್ಣಯಗಳು:
ನರೇಗಾ ಯೋಜನೆಯ ವಾರ್ಷಿಕ ಕಾಮಗಾರಿಗಳ ಕ್ರಿಯಾಯೋಜನೆ ಮಾಡುವ ಕಾರ್ಯ ಪ್ರಸ್ತುತ ಆನ್ ಲೈನ್ ನಲ್ಲಿ ನೋಂದಣಿಯಾಗಬೇಕಿತ್ತು. ಮುಂದಿನ ವರ್ಷದ ಕಾಮಗಾರಿಯನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಆನ್ ಲೈನ್ ತಂತ್ರಾಂಶದಲ್ಲಿ ಸೇರ್ಪಡೆಯಾಗಬೇಕಾಗಿದ್ದು, ಅದನ್ನು ವರ್ಷಕ್ಕೆ ಮೂರು ಭಾರಿಯಂತೆ ಹೆಚ್ಚುವರಿ‌ ಕ್ರಿಯಾಯೋಜನೆ ಮಾಡಲು ಆನ್ ಲೈನ್ ಅವಕಾಶ ಕಲ್ಪಿಸಿ ಕೊಡಬೇಕಾಗಿ ಸಭೆಯಲ್ಲಿ ಫಲಾನುಭವಿಗಳು ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಲಾಯಿತು.


ನರೇಗಾ ಯೋಜನೆ ಕೂಲಿ ಹಾಗೂ ಸಾಮಾಗ್ರಿ ಮೊತ್ತವನ್ನು ಸಕಾಲದಲ್ಲಿ ಪಾವತಿಯಾಗುವಂತೆ ಸಭೆಯಲ್ಲಿ ಫಲಾನುಭವಿಗಳು‌ ಸಭೆಯಲ್ಲಿ ವಿನಂತಿಸಿದರು.


ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ವಿನುತ ಕೆವಿ ಬಳ್ಳಿಕಾನ, ಭಾರತೀಯ ವಸಂತ ಕೌಡಿಚ್ಚಾರು, ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ, ರಾಜೇಶ್ ಎಚ್ ತ್ಯಾಗರಾಜೆ, ನಾರಾಯಣ ನಾಯ್ಕ ಚಾಕೋಟೆ, ಹರೀಶ್ ರೈ ಜಾರತ್ತಾರು, ಅನಿತಾ ಆಚಾರಿ ಮೂಲೆ, ಜಯಂತಿ ಪಟ್ಟು ಮೂಲೆ, ಲೋಕೇಶ್ ಚಾಕೋಟೆ, ಪಂಚಾಯತ್ ಮಾಜಿ ಉಪಾಧ್ಯಕ್ಷ ಇಕ್ಬಾಲ್ ಹುಸೇನ್, ಸದಸ್ಯ ಸುಬ್ಬಪ್ಪ ಪಾಟಾಳಿ, ನರೇಗಾ ಯೋಜನೆಯ ಫಲಾನುಭವಿಗಳು, ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.


ಪ್ರಾಸ್ತಾವಿಕವಾಗಿ ತಾಲೂಕು ಪಂಚಾಯತ್ ಸಂಪನ್ಮೂಲ ಅಧಿಕಾರಿ ಸೌಮ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಪಿ.ಡಿ.ಓ ಸುನಿಲ್ ಎಚ್. ಟಿ ಸ್ವಾಗತಿಸಿ ಕಾರ್ಯದರ್ಶಿ ವಿದ್ಯಾಧರ ಕೆ.ಎನ್ ವಂದಿಸಿದರು.

ಗ್ರಾಮ ಪಂಚಾಯತ್ ಕಡತವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿರುತ್ತಾರೆ. ಕಡತದಲ್ಲಿ ಯಾವುದೇ ಲೋಪದೋಷ ಕಂಡು ಬರುವುದಿಲ್ಲ.ಇದಕ್ಕಾಗಿ‌ ಗ್ರಾಮ ಪಂಚಾಯತ್ ಗೆ‌ ಅಭಿನಂದನೆ ಸಲ್ಲಿಸಿರವುದು ಸಂತಸ ತಂದಿದೆ. ಇದಕ್ಕೆ ಸಹಕರಿಸಿದ ಗ್ರಾಮ ಪಂಚಾಯತ್ ಸದಸ್ಯರು,ಪಿಡಿ ಓ, ಕಾರ್ಯದರ್ಶಿ, ಸಿಬ್ಬಂದಿಗಳು ವಿಶೇಷವಾಗಿ ಮುತುವರ್ಜಿ ವಹಿಸಿ ಕೆಲಸ ನಿರ್ವಹಣೆ ಮಾಡಿದ ಸಿಬ್ಬಂದಿ ಪ್ರಭಾಕರ ರವ‌ರ ಕಾರ್ಯ ಶ್ಲಾಘನೀಯ.
ಸಂತೋಷ್ ಮಣಿಯಾಣಿ ಕುತ್ಯಾಡಿ
ಅಧ್ಯಕ್ಷರು ಗ್ರಾಮ ಪಂಚಾಯತ್ ಅರಿಯಡ್ಕ

LEAVE A REPLY

Please enter your comment!
Please enter your name here