ಕಾವು:ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಇಲ್ಲಿನ 2025-2026 ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಆ.7 ರಂದು ನಡೆಯಿತು.
ಅಧ್ಯಕ್ಷರಾಗಿ ಹೀರಾ ಅಬ್ದುಲ್ ಖಾದರ್ ಹಾಜಿ ಇವರು ಪುನಾರಾಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಮತ್ತು ಅಕ್ಷತಾ ಬಲ್ಯಾಯ, ಖಜಾಂಜಿಯಾಗಿ ರವಿರಾಜ್ ಬೋರ್ಕರ್, ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕಿ ದೀಪಿಕಾ ಚಾಕೋಟೆ, ಜೊತೆ ಕಾರ್ಯದರ್ಶಿಯಾಗಿ ಪ್ರಮೀಳಾ ಪೂಜಾರಿ ಮತ್ತು ಜಗದೀಶ್ ನಾಯ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.
ಉಳಿದಂತೆ ಸಂಘದ ಸದಸ್ಯರು ಗಳಾಗಿ ಬಶೀರ್ ಕೌಡಿಚ್ಛಾರು,, ರವಿಪ್ರಸಾದ್ ರೈ, ಕೆ ಕೆ ಇಬ್ರಾಹಿಂ, ಪ್ರಶಾಂತ್,ತಾಹಿರಾ, ಸ್ವಾಲಿಹ, ಸಾಜಿದ, ಹಸೈನಾರ್,ಸುಲೇಮಾನ್,ಶಾಹುಲ್ ಹಮೀದ್, ,ಕೃತಿಕಾ, ಅಸುರ,ನಸೀಮ, ಒಮೆಗಾ ಮಹಮದ್, ಸುಚಿತ್ರಾ ಇವರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕ ಬದ್ರುದ್ದೀನ್, ಶಿಕ್ಷಕ ಪ್ರತಿನಿಧಿ ಹೇಮಲತಾ ಕಜೆಗದ್ದೆ, ಶೈಕ್ಷಣಿಕ ಸಲಹೆಗಾರ ಕೃಷ್ಣ ಪ್ರಸಾದ್ ಇವರುಗಳು ಉಪಸ್ಥಿತರಿದ್ದರು.