ಬಂಟ್ವಾಳ ಡಿ.ವೈ.ಎಸ್.ಪಿ.ಕಚೇರಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಜಗನ್ನಾಥ ಶೆಟ್ಟಿ ರವರು ಎ.ಎಸ್.ಐ.ಯಾಗಿ ಮುಂಬಡ್ತಿ

0

ವಿಟ್ಲ: ಬಂಟ್ವಾಳ ಡಿ.ವೈ.ಎಸ್.ಪಿ.ಕಚೇರಿಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಜಗನ್ನಾಥ ಶೆಟ್ಟಿ ಅವರು ಎ.ಎಸ್.ಐ.ಯಾಗಿ ಮುಂಬಡ್ತಿ ಹೊಂದಿ ಬಂಟ್ವಾಳ ಗ್ರಾಮಾಂತರ ‌ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.


1997 ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಜಗನ್ನಾಥ ಶೆಟ್ಟಿ ಜಿಲ್ಲೆಯ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 1998 ರಲ್ಲಿ ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಬಳಿಕ ಮಂಗಳೂರು ರೌಡಿ ನಿಗ್ರಹ ದಳದಲ್ಲಿ ಸೇವೆ, ಬಂಟ್ವಾಳ ವೃತ್ತ ನಿರೀಕ್ಷಕರ ಕಚೇರಿ, ಉಪ್ಪಿನಂಗಡಿ ಪೊಲೀಸ್ ಠಾಣೆ, ಬಂಟ್ವಾಳ ಗ್ರಾಮಾಂತರ, ಪುಂಜಾಲಕಟ್ಟೆ, ಮಂಗಳೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಚೇರಿ, ಐಎಸ್ ಡಿ ಬಂಟ್ವಾಳ ಮೊದಲಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಹೆಚ್.ಸಿ.ಯಾಗಿ ಮುಂಬಡ್ತಿ ಹೊಂದಿದ ಇವರು ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಗೆ ವರ್ಗಾವಣೆಯಾದರು. ಬಳಿಕ ಅರಣ್ಯಸಂಚಾರಿ ಇಲಾಖೆ ಮಂಗಳೂರು, ಎಸ್. ಪಿ.ಕಚೇರಿಯ ವಿಶೇಷ ವಿಭಾಗ,ಬಂಟ್ವಾಳ ನಗರ ಪೊಲೀಸ್ ಠಾಣೆ, ಇದೀಗ ಡಿ.ವೈ‌ಎಸ್.ಪಿ.ಕಚೇರಿಯಿಂದ ಎಎಸ್ ಐ ಯಾಗಿ ಮುಂಬಡ್ತಿಯಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಅವರು ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳಪಟ್ಟೆ ಗುತ್ತು ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here