ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಆಟಿಡೊಂಜಿ ದಿನ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಆಟಿಡೊಂಜಿ ದಿನವನ್ನುಜಂಟಿಯಾಗಿ ಆಯೋಜಿಸಲಾಯಿತು. ಭಾರತ ಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ದೀಪ ಬೆಳಗುವುದರ ಮೂಲಕ ಹಾಗೂ ಆಟಿಡೊಂಜಿ ದಿನವನ್ನುಉದ್ಘಾಟಕರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ಸಂಚಾಲಕರಾದ ಮಹಾದೇವ ಶಾಸ್ತ್ರಿಯವರು ಕಳಸಕ್ಕೆ ಭತ್ತತುಂಬುವುದರ ಮೂಲಕ ಮತ್ತು ತೆಂಗಿನಗರಿಯನ್ನು ಅರಳಿಸುವುದರ ಮೂಲಕ ಸಾಂಕೇತಿಕವಾಗಿ ನಡೆಸಿಕೊಟ್ಟರು.


ಕಾರ್ಯಕ್ರಮದ ಉದ್ಘಾಟಕರಾದ ಶ್ರೀಕಾಂತ ಶೆಟ್ಟಿ ಕಾರ್ಕಳ, ಪ್ರಾಂತಕಾರ‍್ಯಕಾರಿಣಿ ಸದಸ್ಯರು, ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಇವರು ಮಾತನಾಡುತ್ತಾ ಕಾಡು ಮತ್ತು ಕಡಲಿನ ನಾಡು ನಮ್ಮ ತಳುನಾಡು, ಪ್ರಕೃತಿಯನ್ನು ಆರಾಧನೆ ಮಾಡುವ ಸುಂದರ ಸಂಸ್ಕೃತಿ ನಮ್ಮದು. ಪ್ರಕೃತಿಯಲ್ಲಿ ಇರುವ ವಸ್ತುವನ್ನೇತಿಂದು ಜೀವನ ತೆಗೆಯುವ ತಿಂಗಳು ಆಟಿ ತಿಂಗಳು. ಇಂತಹ ಅದ್ಭುತವಾದ ಜೀವನ ಪದ್ಧತಿ ನಮ್ಮ ತುಳು ಸಂಸ್ಕೃತಿಯದ್ದು. ಸಂಸ್ಕೃತಿಯ ಜೊತೆಯಲ್ಲಿ ರಾಷ್ಟ್ರೀಯತೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ಧಾರಿ ವಿದ್ಯಾಸಂಸ್ಥೆಗಳದ್ದಾಗಿದೆ. ನಮ್ಮ ಸಮಾಜ, ಸಂಸ್ಕೃತಿ ಸುಭದ್ರವಾಗಿ ಉಳಿಯಬೇಕಾದರೆ ಸಂಸ್ಕಾರಯುತ ಸಂಸ್ಥೆಗಳೇ ಕಾರಣ. ಮಕ್ಕಳಿಗೆಯಾವ ವಿಚಾರವನ್ನು ಕೊಡುತ್ತೇವೋ ಅದರ ಮೇಲೆ ನಮ್ಮ ಭವಿಷ್ಯ ನಿಂತಿದೆ. ತಾಯಿ ಭಾರತಮಾತೆಯ ಐಕ್ಯತೆಗಾಗಿ ನಾವೆಲ್ಲರೂ ಒಂದಾಗಿದುಡಿದು ಭವ್ಯ ಭಾರತವನ್ನು ಕಟ್ಟಬೇಕು ಇದಕ್ಕಾಗಿ ನಾವೆಲ್ಲ ಕಟಿಬಧ್ಧರಾಗೋಣ ಎಂಬುದಾಗಿ ನುಡಿದು ಸಂಸ್ಕೃತಿ, ಪರಂಪರೆ ಹಾಗೂ ರಾಷ್ಟ್ರೀಯತೆಯ ಅರಿವನ್ನು ಮೂಡಿಸಿದರು.


ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ’ ಆಟಿಉತ್ಸ’ ಕರಾವಳಿ ಸಂಸ್ಕೃತಿಯ ಪ್ರತೀಕ. ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳುವುದು ಈಗಿನ ಯುವಜನಾಂಗಕ್ಕೆ ಬಹು ಅಗತ್ಯವಾದ ಅಂಶವಾಗಿದೆ. ನಾಯಕತ್ವದ ಅನುಭವ ಹಾಗೂ ಶಿಸ್ತನ್ನು ತರುವ ಸಲುವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ರಚನೆಯಾಗಿದೆ. ಶಿಕ್ಷಣದ ಜೊತೆ, ವಿದ್ಯಾರ್ಥಿ ಸಂಘವು ಸಂಘಟನೆಯ ರಕ್ಷಣೆ ರಾಷ್ಟ್ರದ ಪರ ಎನ್ನುವ ಚಿಂತನೆಯನ್ನು ಇಟ್ಟುಕೊಂಡು ಕೆಲಸ ಮಾಡಬೇಕುಎಂದು ನುಡಿದು ಸಂಘದ ಪದಾಧಿಕಾರಿಗಳಿಗೆ ಶುಭ-ಹಾರೈಸಿದರು.


ಈ ಸಂದರ್ಭದಲ್ಲಿ 2025-26ನೇ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಶ್ರೀರಾಮ ಕೆ.ಯಸ್ , ಅಂತಿಮ ವರ್ಷದ ಸಿವಿಲ್ ವಿಭಾಗ, ಕಾರ‍್ಯದರ್ಶಿಯಾಗಿ ಪುನೀತ್‌ ಅಂತಿಮ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗ, ಸಾಂಸ್ಕ್ರತಿಕ ಕಾರ‍್ಯದರ್ಶಿಯಾಗಿ ಕವನ್‌ ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗ, ಆಯುಧ ಪೂಜಾ ಕಾರ‍್ಯದರ್ಶಿಯಾಗಿ ಆಕಾಶ್‌ ಅಂತಿಮ ವರ್ಷದ ಆಟೋಮೊಬೈಲ್ ವಿಭಾಗ, ಕ್ರೀಡಾ ಕಾರ‍್ಯದರ್ಶಿಯಾಗಿ ಪ್ರಥಮ್‌ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ವಿದ್ಯಾರ್ಥಿನಿ ಪ್ರತಿನಿಧಿಯಾಗಿ ಅನನ್ಯಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗ ಇವರಿಗೆ ವಿದ್ಯಾರ್ಥಿಕ್ಷೇಮ-ಪಾಲನಾಧಿಕಾರಿಯಾದ ಸುಧಾಕುಮಾರಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಉದ್ಘಾಟಕರಾದ ಶ್ರೀಕಾಂತ್ ಶೆಟ್ಟಿ ಇವರಿಗೆ ಕಾಲೇಜಿನ ಸಂಚಾಲಕರಾದ ಮಹಾದೇವ ಶಾಸ್ತ್ರಿ ನೆನಪಿನ ಕಾಣಿಕೆ ನೀಡಿದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಅಚ್ಯುತ ಪ್ರಭು, ರವಿ ಮುಂಗ್ಲಿಮನೆ, ಈಶ್ವರಚಂದ್ರ, ಖಜಾಂಜಿಯಾದ ನರಸಿಂಹ ಪೈ, ವಿವೇಕಾಂನದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಪ್ರಾಂಶುಪಾಲರಾದ ಮುರಳಿಧರ್ ಯಸ್ ಅತಿಥಿಗಳನ್ನು ಹಾಗೂ ಗಣ್ಯರನ್ನು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀರಾಮ. ಕೆ.ಯಸ್ ವಂದನಾರ್ಪಣೆಗೈದರು. ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರಾದ ಸುಜನ್ಯ, ತೃಪ್ತಿ ಹಾಗೂ ತೃಪ್ತಿ ಪ್ರಾರ್ಥಿಸಿದರು. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಹಿರಿಯ ಉಪನ್ಯಾಸಕಿ ಜಯಲಕ್ಷ್ಮಿ. ಯಸ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here