





ಬೆಟ್ಟಂಪಾಡಿ: ನವೋದಯ ಪ್ರೌಢ ಶಾಲೆಯಲ್ಲಿ ಆ.9ರಂದು ಸಂಸ್ಕೃತ ದಿನವನ್ನು ಆಚರಿಸಲಾಯಿತು.



ವಿದ್ಯಾರ್ಥಿನಿಯರಾದ ಶ್ರೀಜಾ, ತೃಪ್ತಿ ಕೃತಿಕಾ, ಧನ್ವಿ, ಧನ್ಯಶ್ರೀ, ವಿಭಾಶ್ರೀ, ಮಮತಾ ಮತ್ತು ತನುಶ್ರೀ ಪ್ರಾರ್ಥಿಸಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಗಣೇಶ್ ರೈ ಇವರು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆಯನ್ನು ನೀಡಿದರು.






ಮುಖ್ಯ ಗುರುಗಳಾದ ಪುಷ್ಪಾವತಿ ಎಸ್ ಇವರು ಅಧ್ಯಕ್ಷತೆಯನ್ನು ವಹಿಸಿ, ಸಂಸ್ಕೃತ ಭಾಷೆಯ ಗರಿಮೆ ಕುರಿತು ಮಾತನಾಡಿದರು. ಸಂಸ್ಕೃತ ಅಧ್ಯಾಪಕಿಯಾಗಿರುವ ಶೋಭಾ ಬಿ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಧನುಷ್ ಮತ್ತು ಮಿಥುನ್ ಕುಮಾರ್ ಸಂಸ್ಕೃತ ಸಂಭಾಷಣೆಯ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಕೃತಿಕಾ, ಧನ್ವಿ, ಶ್ರೀಜಾ,ಮಧುಶ್ರೀ, ಕೃತಿಕಾ ಡಿ ಮತ್ತು ಅರ್ಪಿತಾ ಇವರಿಂದ ವಿವಿಧ ಸಂಸ್ಕೃತ ನೃತ್ಯ ವೈವಿಧ್ಯವು ನಡೆಯಿತು. ವಿವಿಧ ವಸ್ತುಗಳ ಪ್ರದರ್ಶನದ ಮೂಲಕ, ಸಂಸ್ಕೃತ ಪದಗಳನ್ನು ಬರೆಯುವ, ಸ್ಮರಣ ಶಕ್ತಿ ಸ್ಪರ್ಧೆಯನ್ನು ನಡೆಸಿ, ಬಹುಮಾನ ವಿತರಿಸಲಾಯಿತು.

ಕುಮಾರಿ ಶ್ರೀಜಾ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕೃತಿಕಾ ಇವರು ಧನ್ಯವಾದ ಸಮರ್ಪಣೆ ಗೈದರು. ಶಿಕ್ಷಕಿಯರಾದ ಸುಮಂಗಲಾ ಕೆ, ಭುವನೇಶ್ವರಿ ಎಂ, ಗೌತಮಿ, ಕಂಪ್ಯೂಟರರ್ ಶಿಕ್ಷಕಿ ಭವ್ಯ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಪಿ, ಶಿಕ್ಷಕೇತರ ಸಿಬ್ಬಂದಿ ನಾರಾಯಣ ಬನ್ನಿಂತಾಯ ಇವರು ಕಾರ್ಯಕ್ರಮಕ್ಕೆ ಸಹಕರಿಸಿದರು.










