ಬಡಗನ್ನೂರು: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಸೆಕ್ಷನ್ 64 ರಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ವಿತರಿಸುವ ಅಧಿಕಾರ ಗ್ರಾಮ ಪಂಚಾಯತಿಗಿದ್ದು ಸದರಿ ಸಬ್ ಸೆಕ್ಷನ್ 5-A ಪ್ರಕಾರ ಗ್ರಾಮ ಪಂಚಾಯತಿಗಳು ಲೇಔಟ್ ಅನುಮೋದನೆ ಮತ್ತು ಕಟ್ಟಡ ಪರವಾನಿಗೆ ವಿತರಿಸುವಾಗ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961ನ್ನು ಪಾಲಿಸಬೇಕಾಗಿದ್ದು, ಗ್ರಾಮ ಪಂಚಾಯತಿಗಳಿಗೆ ಲೇಔಟ್ ಅನುಮೋದನೆ ಮತ್ತು ಕಟ್ಟಡ ನಕ್ಷೆಗೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರ ಇಲ್ಲದಾಗಿದೆ ಆದ್ದರಿಂದ ಕೂಡಲೇ ಸದರಿ ಸೆಕ್ಷನಿಗೆ ತಿದ್ದುಪಡಿ ತಂದು ಸದರಿ ಎಲ್ಲಾ ಅನುಮೋದನೆಗಳನ್ನು ಗ್ರಾಮ ಪಂಚಾಯತಿಗಳಲ್ಲಿ ನೀಡಲು ಗ್ರಾಮಾಂತರ ಯೋಜನೆ ಅಧಿನಿಯಮ ರೂಪಿಸಿ ಗ್ರಾಮೀಣ ವಿನ್ಯಾಸಕಾರರನ್ನು ನೇಮಿಸುವಂತೆ ಮತ್ತು ಈ ಸ್ವತ್ತು ತಂತ್ರಾಂಶದಲ್ಲಿ 11-B ಸೃಜಿಸಲು, ವಸತಿ ಯೋಜನೆಯಡಿ ಮನೆ ನಿರ್ಮಿಸಿದವರಿಗೆ ಕದನಂಬ್ರ ನೀಡಲು ಮತ್ತು ಈಗಾಗಲೇ 94 C & 94CC ಹಕ್ಕುಪತ್ರ ವಿತರಿಸಿದ ಫಲಾನುಭವಿಗಳಿಗೆ ನೇರವಾಗಿ ಗ್ರಾಮ ಪಂಚಾಯತಿಗಳಲ್ಲಿ ನಮೂನೆ 9&11A ನೀಡಲು ಅವಕಾಶ ಕಲ್ಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರಿಗೆ ಇಂದು ಮನವಿ ಸಲ್ಲಿಸಿದರು.
Home ಇತ್ತೀಚಿನ ಸುದ್ದಿಗಳು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತರುವಂತೆ ಸಚಿವರಿಗೆ ಮನವಿ ಸಲ್ಲಿಸಿದ...