ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷ ಕೂಡ ಭಜಕರಿಗಾಗಿ ಶ್ರೀ ಕೃಷ್ಣನ ಭಕ್ತಿಗೀತೆ ಆಗಸ್ಟ್ 14 ರಂದು ಕುಕ್ಕೇ ಶ್ರೀ ಸುಬ್ರಹ್ಮಣ್ಯದಲ್ಲಿ ಬಿಡುಗಡೆಗೊಳ್ಳಲಿದೆ.

ಭಜನೆ ಹಾಗೂ ಕುಣಿತ ಭಜನಾ ತಂಡಗಳಿಗಾಗಿ ಹೊಸ ರಾಗ ಸಂಯೋಜನೆಯಲ್ಲಿ ಮೂಡಿ ಬಂದ ಶ್ರೀ ಕೃಷ್ಣ ಪರಮಾತ್ಮನ ಭಕ್ತಿಗೀತೆ ಪುತ್ತೂರು ಜಗದೀಶ್ ಆಚಾರ್ಯ ಮತ್ತು ತಂಡದಿಂದ ಮೂಡಿಬಂದಿದೆ.
ಹಾಡಿನ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಮತ್ತು ಗಾಯನ ಪುತ್ತೂರು ಜಗದೀಶ್ ಆಚಾರ್ಯ ಮಾಡಿದ್ದು, ಅವರೊಂದಿಗೆ ಗಾಯಕಿಯರಾಗಿ ಕಲಾವಿದೆಯರಾದ ಜನ್ಯ ಪ್ರಸಾದ್ ಅನಂತಾಡಿ, ಉಜ್ವಲ ಆಚಾರ್ ಮಂಕುಡೆ, ಸಾಹಿತ್ಯ ಆಚಾರ್ಯ ಭಾಗವಹಿಸಿದ್ದಾರೆ. ಈ ಭಕ್ತಿಗೀತೆ ವೀಡಿಯೋ ಆಲ್ಬಮ್ ನ ನಿರ್ಮಾಣವನ್ನು ಬಹರೈನ್ ನಲ್ಲಿರುವ ನವೀನ್ ಮಾವಜಿ , ಕಾವ್ಯ ನವೀನ್ ಮಾವಜಿಯವರು ಮಾಡಿದ್ದಾರೆ. ವಿಡಿಯೋ ಹಾಗೂ ಸಂಕಲನ ಶ್ರೀಟಾಕೀಸ್ ರವರದ್ದಾಗಿದೆ.