ಪುತ್ತೂರು: ಸಹೋದರತ್ವದ ಸಂಕೇತವಾದ ರಕ್ಷಾಬಂಧನವು ಸಾಂಪ್ರದಾಯಿಕ ಪುರಾತನ ಹಬ್ಬ. ಪರಸ್ಪರ ರಕ್ಷಣೆಯನ್ನು ಮಾಡುವ ಸಂಕೇತವಾದ ಹಬ್ಬವಿದು. ಪ್ರೀತಿ ವಿಶ್ವಾಸದ ಹಬ್ಬವಿದು. ಇಂತಹ ಮಹತ್ವಪೂರ್ಣ ರಕ್ಷಾಬಂಧನದ ಆಚರಣೆಯನ್ನು ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ರಕ್ಷೆಯನ್ನು ಕಟ್ಟುವುದರ ಮೂಲಕ ಪುಟಾಣಿಗಳ ಜೊತೆ ಆ.೮ರಂದು ಆಚರಿಸಲಾಯಿತು. ಜೊತೆಗೆ ಪುರಸಭೆ ಕಛೇರಿ, ತಾಲೂಕು ಪಂಚಾಯತ್, ಪೊಲೀಸ್ ಸ್ಟೇಷನ್, ಬಿಜೆಪಿ ಕಚೇರಿ, ಎಸ್‌ಸಿಡಿಸಿಸಿ ಬ್ಯಾಂಕ್, ಮಹಿಳಾ ಸೊಸೈಟಿ, ಅಂಚೆ ಕಛೇರಿ ಮುಂತಾದ ಕಡೆ ಪುಟಾಣಿಗಳು ಮಾತಾಜಿವರೊಂದಿಗೆ ತೆರಳಿ ರಕ್ಷೆ ಕಟ್ಟಿದರು.

