ಪುತ್ತೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗ್ರಾಮ ಪಂಚಾಯತ್ ಕೊಳ್ತಿಗೆ ಹಾಗೂ ಚಿಗುರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಕೊಳ್ತಿಗೆ ಇದರ ಜಂಟಿ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಹೊಲಿಗೆ ತರಬೇತಿಯನ್ನು ಉದ್ಘಾಟಿಸಲಾಯಿತು.
ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಕೇವಲ ತರಬೇತಿ ಪಡೆಯುವುದು ಮುಖ್ಯವಲ್ಲ ತರಬೇತಿ ನಂತರ ಅದನ್ನು ಮುಂದುವರಿಸಿಕೊಂಡು ಹೋಗುವುದು ಅಗತ್ಯ, ತರಬೇತಿ ನಂತರ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ತಿಳಿಸಿ ಮಹಿಳೆಯರು ಇದರ ಪ್ರಯೋಜನ ಪಡೆಯಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಕ್ಕಮ್ಮ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಸ್ವ-ಉದ್ಯೋಗದ ನಿಯಮಗಳು, ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಈ ಸಂಸ್ಥೆಗಳ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ತಾಲೂಕು ಅಭಿಯಾನ ನಿರ್ವಹಣೆ ಘಟಕದ ತಾಲೂಕು ವ್ಯವಸ್ಥಾಪಕರು ಕೃಷಿಯೇತರ ಚಟುವಟಿಕೆಯ ನಳಿನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಮಾತನಾಡಿ, ತರಬೇತಿ ಪಡೆದು ಸ್ವ ಉದ್ಯೋಗ ವನ್ನು ರೂಪಿಸಿಕೊಳ್ಳಿ ನಮ್ಮಿಂದ ಆಗುವ ಸಹಾಯ ಮಾಡುವ ಎಂದರು.ಪಂಚಾಯತ್ ಕಡೆಯಿಂದ ಒಂದು ಟೈಲರಿಂಗ್ ಮಿಷನ್ ಕೊಡುತ್ತೇವೆ ಎಂಬ ಭರವಸೆ ನೀಡಿದರು.
ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತೀರ್ಥನಂದ ದುಗ್ಗಳ, ಚಿಗುರು ಸಂಜೀವಿನಿ ಗ್ರಾಮ್ ಪಂಚಾಯತ್ ಒಕ್ಕೂಟದ ಉಪಾಧ್ಯಕ್ಷರು ಹಾಗೂ ಟೈಲರಿಂಗ್ ತರಬೇತಿದಾರರಾದ ಕಸ್ತೂರಿ ರೈ ಉಪಸ್ಥಿತರಿದ್ದರು. ಶೀಲಾವತಿ ಮತ್ತು ಸುಮಿತ್ರ ಪ್ರಾರ್ಥಿಸಿದರು. ಹರಿಣಿ ಸ್ವಾಗತಿಸಿದರು. ಜಯಪ್ರದ ವಂದಿಸಿದರು. ವಿಶಾಲಾಕ್ಷಿ ನಿರೂಪಿಸಿದರು.