ಮರ್ದಾಳ: ಬಿಳಿನೆಲೆ ಗ್ರಾಮದ ಒಗ್ಗು ಮನೆ ದಿ.ಕೂಸಪ್ಪ ಗೌಡರ ಪತ್ನಿ, ಶತಾಯುಷಿ ಲಕ್ಷ್ಮೀ (107ವ.)ಯವರು ವಯೋಸಹಜ ಅನಾರೋಗ್ಯದಿಂದ ಆ.14ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಬಾಲಕೃಷ್ಣ ಗೌಡ, ಗೋಪಾಲ ಗೌಡ, ಸಿಪಿಸಿಆರ್‌ಐ ಉದ್ಯೋಗಿಗಳಾದ ಬಾಳಪ್ಪ ಗೌಡ, ಚೆನ್ನಪ್ಪ ಗೌಡ, ಜತ್ತಪ್ಪ ಗೌಡ, ಪುತ್ರಿಯರಾದ ಲಲಿತಾ, ಶಿವಮ್ಮ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.