ವಿಜ್ಞಾನ ಮಾದರಿ ತಯಾರಿ: ವಿವೇಕಾನಂದ ಆ.ಮಾ ವಿದ್ಯಾರ್ಥಿಗಳ ತಂಡ ದ್ವಿತೀಯ 

0

ಪುತ್ತೂರು:ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಡಾ ವಿಕ್ರಂ ಸಾರಾಭಾಯಿ ಅವರ ಜನ್ಮದಿನದ ಸ್ಮರಣಾರ್ಥ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮತ್ತು ಕೆನರಾ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿರುವ ವಿಕ್ರಮ ಕಾರ್ಯಕ್ರಮವು ಆ.12ರಂದು ಕೆನರಾ ವಿಕಾಸ್ ಕ್ಯಾಂಪಸ್ ಮಂಗಳೂರಿನಲ್ಲಿ ಜರಗಿತು.

 ಇದರ ಅಂಗವಾಗಿ 9ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ ‘ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ’ಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮೂರು ತಂಡಗಳು ಭಾಗವಹಿಸಿದ್ದು, 9ನೇ ತರಗತಿಯ ವಿದ್ಯಾರ್ಥಿಗಳಾದ ಕ್ಷಮೇತ್ ಜೈನ್ (ಹನೀಶ್ ಕುಮಾರ್ ಹಾಗೂ ಶೃತಿ ಕುಮಾರಿ ದಂಪತಿಗಳ ಪುತ್ರ) ಆಶಿಕ್ (ಸತೀಶ್ ಕೆ ಹಾಗೂ ದೀಕ್ಷಾ ಪಿಎನ್ ದಂಪತಿಗಳ ಪುತ್ರ )ಪ್ರಣವ್ ಪ್ರಭು ( ಪದ್ಮನಾಭ ಪ್ರಭು ಹಾಗೂ ವಿದ್ಯಾಕುಮಾರಿ ದಂಪತಿಗಳ ಪುತ್ರ) ಇವರ ತಂಡವು ದ್ವಿತೀಯ ಸ್ಥಾನಗಳಿಸಿ ರೂಪಾಯಿ 3000 ನಗದು ಬಹುಮಾನ ಮತ್ತು ವಿಕ್ರಮ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಶಾಲಾ ಮುಖ್ಯ ಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here