ಪುತ್ತೂರು: ತಾಲೂಕಿನ ಕಬಕ ಪಂಚಾಯತ್ ಕಚೇರಿ ಬಳಿ ಇರುವ ರೋಟರಿ ಮುಳಿಯ ಕಟ್ಟಡದಲ್ಲಿ ಆ.18 ರಂದು ಹೊಟೇಲ್ ನಮ್ಮ ಮನೆ ಶುಭಾರಂಭಗೊಳ್ಳಲಿದೆ. ಶ್ರೀವಾರಿ ಗ್ರೂಪ್ಸ್ ಮತ್ತು ನಮ್ಮ ಮನೆ ಗ್ರೀನ್ ಗ್ರೋಸರ್ಸ್ ಮಾಲಕತ್ವದ ಈ ಹೊಟೇಲ್‌ನಲ್ಲಿ ಶುದ್ಧ ಸಸ್ಯಾಹಾರಿ ಬ್ರಾಹ್ಮಣರ ಮನೆ ಅಡುಗೆಯ ರುಚಿಯನ್ನು ನೀವು ಸವಿಯಬಹುದಾಗಿದೆ.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ ವಿವಿಧ ಖಾದ್ಯಗಳನ್ನು ಗ್ರಾಹಕರಿಗೆ ಉಣಬಡಿಸಲಿರುವ ಈ ಹೊಟೇಲ್‌ನಲ್ಲಿ ಬೆಳಗ್ಗೆ ಚಿತ್ರಾನ್ನ, ಅನ್ನದ ಹಲವು ಬಗೆಯ ತಿನಿಸುಗಳು, ನೀರು ದೋಸೆ, ಅಕ್ಕಿರೊಟ್ಟಿ-ಕಾಯಿಸುಳಿ, ಸೇಮಿಗೆ-ರಸಾಯನ, ಪತ್ರೊಡೆ, ಕೊಟ್ಟೆಕಡುಬು, ಒಗ್ಗರಣೆ ಮಂಡಕ್ಕಿ, ಒಗ್ಗರಣೆ ಅವಲಕ್ಕಿ, ಅಲಸಂಡೆ ಕಾಳಿನ ವಡೆ, ಖಾರ ಮಂಡಕ್ಕಿ, ಖಾರ ಅವಲಕ್ಕಿ, ಮಿರ್ಚಿ ಮಂಡಕ್ಕಿ, ಸೇಮಿಗೆ ಉಪ್ಪಿಟ್ಟು, ಪಡ್ಡು ಸೇರಿದಂತೆ ಅನೇಕ ಖಾದ್ಯಗಳು ಲಭ್ಯವಿದೆ.
ಮಧ್ಯಾಹ್ನ ಊಟಕ್ಕೆ ರಾಗಿ ಮುದ್ದೆ-ಉಪ್ಸಾರು, ಗಂಜಿ ಪುಳಿಮುಂಚಿ, ಕಜೆ ಅಕ್ಕಿ ಊಟ, ವೆರೈಟಿ ತಂಬುಳಿ, ಮೆಣಸುಕಾಯಿ ಇತ್ಯಾದಿ ಇರಲಿದ್ದು, ಸಂಜೆ ವಿವಿಧ ಚಾಟ್ಸ್‌ಗಳು ಇಲ್ಲಿ ದೊರೆಯಲಿದೆ.
ಸಂಜೆ 7 ಗಂಟೆಯಿಂದ 10.30ರವರೆಗೆ ಜೋಳದ ರೊಟ್ಟಿ ಊಟ, ಮುದ್ದೆ ಊಟ ಇರಲಿದ್ದು, ಜೋಳದ ರೊಟ್ಟಿ, ರಾಗಿ ರೊಟ್ಟಿ, ಸಜ್ಜೆ ರೊಟ್ಟಿ, ತಾಲಿಪಟ್ಟು, ಎಣ್ಣೆಗಾಯಿ, ಪುಂಡಿಸೊಪ್ಪು, ಮೆಂತೆ ಸೊಪ್ಪು, ಸೊಪ್ಪಿನ ಪಲ್ಯಗಳು, ಮೊಳಕೆ ಕಾಳು, ಹಸಿ ಸೊಪ್ಪು, ತರಕಾರಿ ಪಚ್ಚಡಿಗಳು, ಬೆಂಡಿ, ಮೆಂತೆ ಚಟ್ನಿ, ಶೇಂಗಾ, ಗುರ್ರೆಳ್ಳು, ಬೆಳ್ಳುಳ್ಳಿ, ಅಗಸಿ, ಪುಟಾಣಿ ಬೇಳೆ ಚಟ್ನಿಹುಡಿಗಳು ಇರಲಿದೆ. ಇದರ ಜೊತೆಗೆ, ಹೊಟ್ಟೆ ತನ್ನಗಾಗಿಸಲು ನ್ಯಾಚುರಲ್ ಬೊಂಡ ಡೆಸರ್ಟ್, ಹಣ್ಣಿನ ಜ್ಯೂಸ್, ಹೋಮ್‌ಮೇಡ್ ಜ್ಯೂಸ್‌ಗಳು ಲಭ್ಯವಿರಲಿದೆ.
ತುಳುನಾಡಿನ ಹಾಗೂ ಬಯಲುಸೀಮೆಯ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಇಲ್ಲಿ ಲಭ್ಯವಿರಲಿದೆ. ಸೋಡಾಹುಡಿ, ಟೇಸ್ಟಿಂಗ್ ಪೌಡರ್, ಪ್ರಿಸರ್ವೇಟಿವ್ ಸೇರಿದಂತೆ ಯಾವುದೇ ಮಿಶ್ರಣ ಅಥವಾ ಕೃತಕ ಪದಾರ್ಥಗಳನ್ನು ಬಳಸುವುದಿಲ್ಲ. ಹೊಟೇಲ್ ಗ್ರಾಹಕರಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂದು ಮಾಲಕರಾದ ಪಲ್ಲವಿ ಉದಯಕುಮಾರ್ ಹನುಮಜ್ಜೆ, ಸುಶ್ಮಿತಾ ಪ್ರಶಾಂತ್ ಕಂಜರ್ಪಣೆ ತಿಳಿಸಿದ್ದಾರೆ.