ಪುತ್ತೂರು: ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಚರಿಸಲಾದ 79ನೇಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಂಸ್ಥೆಯ ಸಂಚಾಲಕ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಕೆ ಧ್ವಜಾರೋಹಣಗೈದರು.
ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯ ದಿನವು ಬರೀ ಆಗಸ್ಟ್ 15ಕ್ಕೆ ಆಚರಣೆಗೆ ಸೀಮೀತವಾಗದೆ ಹೇಗೆ ಬದುಕು ಕಟ್ಟಿಕೊಳ್ಳಬೇಕು ಜೊತೆಗೆ ಜೀವನಾಧಾರಿತ ಮಾನವೀಯ ಮೌಲ್ಯಗಳ ಬಗ್ಗೆ ಸವಿವರ ವಿದ್ಯಾರ್ಥಿಗಳಿಗೆ ವಿವರಿಸಿದರು. ಸಂಸ್ಥೆಯ ಆಡಳಿತಾಧಿಕಾರಿಯಾದ ಅಡ್ವೊಕೇಟ್ ಅಶ್ವಿನ್ ಎಲ್ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಿಕೊಟ್ಟರು. ಪ್ರಥಮ ವಾಣಿಜ್ಯ ವಿಭಾಗದ ಅಬ್ದುಲ್ ರಹ್ಮನುಲ್ ಫಾರಿಸ್ ಐ ನಿರೂಪಣೆಗೈದು, ತೃತೀಯ ಬಿಸಿಎ ಪವಿತ್ರ ಸ್ವಾಗತಿಸಿ, ಪ್ರಥಮ ಪಿಯುಸಿ ಶ್ರೇಯ ಮತ್ತು ಬಳಗ ಧ್ವಜಗೀತೆ ಹಾಡಿದರು. ತೃತೀಯ ಬಿಎ ಕಲ್ಷನಾ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ರಾಜಲಕ್ಷ್ಮೀ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.