ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ 79ನೇ ಸ್ವಾಂತತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಆಟೋ ಚಾಲಕರಾದ ಕೆ. ಗೋವಿಂದ ನಾಯ್ಕ ಆರ್ಲಪದವು ಇವರು ಧ್ವಜರೋಹಣವನ್ನು ನೆರವೇರಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾದ ಉಲ್ಲ್‌ಸ್ ಪೈ ಸದಸ್ಯರು ಲಯನ್ಸ್ ಕ್ಲಬ್ ಪುತ್ತೂರು ಇವರು ಮಾತನಾಡುತ್ತಾ ನಮಗೆ ನಮ್ಮ ಹಿರಿಯರು ಬಹಳ ಕಷ್ಟ ಪಟ್ಟು ಸ್ವಾತಂತ್ರ್ಯವನ್ನು ನೀಡಿದ್ದಾರೆ. ಅದನ್ನು ಉಳಿಸುವ ಜೊತೆಗೆ ಯುವ ಜನರು ದೇಶ ಸೇವೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್ ಪಿ.ವಿ. ಇವರು ಮಾತನಾಡುತ್ತಾ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಲು ಬಲಿದಾನಗೈದ ಪ್ರಮುಖರಾದ ಭಗತ್‌ಸಿಂಗ್ ಅವರ ಜೀವನದ ಬಗ್ಗೆ ತಿಳಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿಕೊಟ್ಟರು. ಸಂಸ್ಥೆಯ ಮುಖ್ಯ ಶಿಕ್ಷಕಿಯಾದ ಪ್ರಮೀಳಾ ಎನ್. ಡಿ. ಇವರು ಮಾತನಾಡುತ್ತಾ ಸ್ವಾತಂತ್ರ್ಯ ಪಡೆಯುವ ಮೊದಲು ಭಾರತದ ಸ್ಥಿತಿಗತಿಗಳು ಯುದ್ಧಗಳು ತ್ಯಾಗ ಬಲಿದಾನಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ತಿಳಿಸಿಕೊಟ್ಟರು.

ಸಂಸ್ಥೆಯ ಉಪನ್ಯಾಸಕರಾದ ಮಾಧವಿ, ಹರ್ಷಿತಾ, ಮಧುಶ್ರೀ, ರಾನಿಹ ಇವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಕೆ. ಹೇಮಲತಾ ಗೋಕುಲ್‌ನಾಥ್, ಉಪನ್ಯಾಸಕ ವೃಂದ, ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನೆಯ ಮೂಲಕ ರಂಜಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ನಾಸಿರ್ ಕಾರ್ಯಕ್ರಮವನ್ನು ನಿರೂಪಿಸಿದರು.