ಲಿಯೋ ಕ್ಲಬ್ ಮತ್ತು ಇಂಟರಾಕ್ಟ್ ಕ್ಲಬ್ ಶ್ರೀ ರಾಮಕೃಷ್ಣ ಪುತ್ತೂರು ವತಿಯಿಂದ 79 ನೇ ಸ್ವಾತಂತ್ರ್ಯೋತ್ಸವ

0

ಪುತ್ತೂರು: ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು ಇಲ್ಲಿ ಲಿಯೋ ಕ್ಲಬ್ ಮತ್ತು ಇಂಟರಾಕ್ಟ್ ಕ್ಲಬ್ ಶ್ರೀ ರಾಮಕೃಷ್ಣ ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಸ್ಥೆಯ ಸಂಚಾಲಕರಾದ ಶ್ರೀ ಕಾವು ಹೇಮನಾಥ ಶೆಟ್ಟಿ ಇವರು ನೆರವೇರಿಸಿದರು. ಧ್ವಜಾರೋಹಣದ ನಂತರ ಅವರು ದೇಶಾಭಿಮಾನ ಮತ್ತು ದೇಶಪ್ರೇಮದ ಕುರಿತು ಹೃದಯಸ್ಪರ್ಶಿ ಮಾತುಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಖಣಟಿ. ಜಗಜೀವನ್ ದಾಸ್ ಅವರು ದೇಶ ಹಾಗೂ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿ ಶಿಲ್ಪಾ ಹರಿಪ್ರಸಾದ್ ರೈ ಅವರು ಮಕ್ಕಳ ಸೇವಾ ಮನೋಭಾವ ಹಾಗೂ ದೇಶಸೇವೆಯ ಬಗ್ಗೆ ಪ್ರೇರಣದಾಯಕ ಸಂದೇಶ ನೀಡಿದರು. ಎಲ್ಲಾ ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.


ಈ ಕಾರ್ಯಕ್ರಮದ ಅಂಗವಾಗಿ, ಲಿಯೋ ಕ್ಲಬ್ ಮತ್ತು ಇಂಟರಾಕ್ಟ್ ಕ್ಲಬ್ ಶ್ರೀ ರಾಮಕೃಷ್ಣ ಪುತ್ತೂರು ಇದರ ವತಿಯಿಂದ ಪೊಲೀಸ್ ಸಿಬ್ಬಂದಿಯವರಿಗೆ ಹಾಗೂ ಮನೆಗಳಿಗೆ ಭೇಟಿ ನೀಡಿ ಸಿಹಿ, ಹೂವು, ತಂಪು ಪಾನೀಯ ನೀಡುವ ಮೂಲಕ ೭೯ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಲಿಯೋ ಅಧ್ಯಕ್ಷ ಶ್ರೀವತ್ಸ, ಕಾರ್ಯದರ್ಶಿ ಲಾವಣ್ಯ, ಲಿಯೋ ಮತ್ತು ಇಂಟರಾಕ್ಟ್ ಮಾರ್ಗದರ್ಶಿ ಶಿಕ್ಷಕಿಯರಾದ ಹರ್ಷಿಣಿ ಹಾಗೂ ತುಳಸಿ, ಇಂಟರಾಕ್ಟ್ ಅಧ್ಯಕ್ಷ ಅಭಿನ್ ಬಿ.ಎ., ಕಾರ್ಯದರ್ಶಿ ಭವಿತಾ, ಖಜಾಂಜಿ ಪೂರ್ವಿಕಾ ಹಾಗೂ ಇತರ ಲಿಯೋ ಮತ್ತು ಇಂಟರಾಕ್ಟ್ ಕ್ಲಬ್‌ನ ಸದಸ್ಯರು ಹಾಜರಿದ್ದು, ಸಮಾಜಕ್ಕಾಗಿ ಶ್ರಮಿಸುವ ವೀರರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.


ಈ ರೀತಿಯಲ್ಲಿ ಲಿಯೋ ಕ್ಲಬ್ ಮತ್ತು ಇಂಟರಾಕ್ಟ್ ಕ್ಲಬ್ ಶ್ರೀ ರಾಮಕೃಷ್ಣ ಪುತ್ತೂರು ಇವರು ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಸ್ಮರಣೀಯವಾಗಿ ಆಚರಿಸಲಾಯಿತು.

LEAVE A REPLY

Please enter your comment!
Please enter your name here