ಪುತ್ತೂರು: ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಮೊಗೇರ ಗೇಟ್ವೇ ಇದರ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪನೆತ್ತಡ್ಕದಲ್ಲಿ ಆಚರಿಸಲಾಯಿತು.ಮೊಗೇರ ಗೇಟ್ವೇ ವತಿಯಿಂದು ಇದು ೪ ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಾಗಿದ್ದು ಬೆಳಿಗ್ಗೆ ಕಬಕ ಸ.ಹಿ.ಪ್ರಾ.ಶಾಲಾ ಮುಖ್ಯಗುರು ಬಾಬು ಟಿ.ಕುಂಬ್ರರವರು ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪತ್ರಕರ್ತ ಸಿಶೇ ಕಜೆಮಾರ್ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅಂಚೆ ಪಾಲಕಿ ರೂಪ ಎಸ್.ಪುರಷರಕಟ್ಟೆ, ಮೊಗೇರ ಗೇಟ್ವೇಯ ಸಂಘಟನಾ ಕಾರ್ಯದರ್ಶಿ ಸುಂದರಿ ಸಾರ್ಯ, ಗೌರವ ಅಧ್ಯಕ್ಷರಾದ ಪಕೀರ ಮೊಗೇರ, ಗೌರವ ಸಲಹೆಗಾರ ಅಶೋಕ ಬಿ, ಪ್ರಗತಿಪರ ಕೃಷಿಕ ಚಂದ್ರಶೇಖರ, ಹಿರಿಯರಾದ ಸುಂದರಿ ಉಪಸ್ಥಿತರಿದ್ದರು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಚಮೀಷಾ ಯು. ಭಂಡಾರಿಕರೆ ಪ್ರಾರ್ಥಿಸಿದರು. ವಿಜಯ ಬಿ.ಸ್ವಾಗತಿಸಿದರು. ಯಶಸ್ವಿನಿ, ಜಗದೀಶ್,ಕೃತಿಕಾ, ಆಶಾ,ಪ್ರಣನ್ಯ, ಚಮೀಷಾ ಯು. ಸುಂದರ ಸಾರ್ಯ, ಅಶೋಕ ಪಿ, ಪನೆತ್ತಡ್ಕ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸುಂದರ ಸಾರ್ಯ ವಂದಿಸಿದರು. ಉಮೇಶ್ ಭಂಡಾರಿಕೆರೆ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಪಿ, ಉಮೇಶ್ ಭಂಡಾರಿಕೆರೆ ಹಾಗೂ ಅಶೋಕ ಬಿ.ರವರು ಸೇರಿಕೊಂಡು ಸ್ಥಾಪನೆ ಮಾಡಿದ ಮೊಗೇರ ಗೇಟ್ವೇ ಸಂಘಟನೆಯಲ್ಲಿ ಈಗಾಗಲೇ ೪೦ ಕ್ಕೂ ಅಧಿಕ ಸದಸ್ಯರಿದ್ದಾರೆ. ಕಳೆದ ೪ ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳಿಗೆ, ಸಂಘಟನೆ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಕೂಡ ನಡೆಸಿಕೊಂಡು ಬರುತ್ತಿದ್ದಾರೆ.