ಪುತ್ತೂರು: ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಧ್ವಜಾರೋಹಣವನ್ನು ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಭಾರತೀಯ ಸೇನೆಯ ಸೈನಿಕರಾದ ಚಂದ್ರಶೇಖರ ಉರಿಕ್ಯಾಡಿ ಇವರು ನೆರವೇರಿಸಿದರು. ತದನಂತರ ವಿದ್ಯಾರ್ಥಿಗಳಿಂದ ತಿರಂಗ ಯಾತ್ರೆ ಈಶ್ವರಮಂಗಲ ಪೇಟೆಯವರಿಗೆ ನಡೆಯಿತು.

ಪೇಟೆಯಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಊರಿನ ವಿದ್ಯಾಭಿಮಾನಿಗಳು ಸಿಹಿ ತಿಂಡಿಯನ್ನು ವಿತರಿಸುವ ಮೂಲಕ ಸಂಭ್ರಮವನ್ನು ಹಂಚಿಕೊಂಡರು. ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಸೈನಿಕರಾದ ಚಂದ್ರಶೇಖರ್ ಉರಿಕ್ಯಾಡಿಯವರು ಶಾಲೆಯ ವಿದ್ಯಾರ್ಥಿ ಜೀವನದ ನೆನಪುಗಳು ಹಾಗೂ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಸೇರ್ಪಡೆಗೊಳ್ಗೊಳ್ಳಲು ಯಾವ ರೀತಿ ತಯಾರಿಯನ್ನು ನಡೆಸಬೇಕು ಹಾಗೂ ಸೈನ್ಯದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಸಮಾರಂಭದ ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಣ್ಣಯ್ಯ ಗೌಡ ಉರಿಕ್ಯಾಡಿ ,ಸಂಚಾಲಕರಾದ ಸರ್ವೋತ್ತಮ ಬೋ ರ್ಕರ್,ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂಜಿ ಕುಂಜತ್ತಾಯ ಹಾಗೂ ನಿರ್ದೇಶಕರಾದ ಕೃಷ್ಣಪ್ಪ ಗೌಡ ಮತ್ತು ಮುಖ್ಯ ಗುರುಗಳಾದ ವನಿತಾ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಸೈನಿಕರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿತಿಂಡಿಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವೀಂದ್ರ ಮಾಣಿಲತ್ತಾಯ ಇವರು ಕೊಡಮಾಡಿದರು .ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಶ್ರೀನಿವಾಸ ಕೆ ,ಪಾವನ ಕೃಷ್ಣ ಭಟ್ ಸಹಕಾರವನ್ನು ನೀಡಿದರು. ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ -ಶಿಕ್ಷಕೇತರರು ಉಪಸ್ಥಿತರಿದ್ದರು.