ಕಾಣಿಯೂರು: ಬೆಳಂದೂರು ಗ್ರಾಮದ ಪಳ್ಳತ್ತಾರು ಮುಹಿಯದ್ದೀನ್ ಜುಮಾ ಮಸೀದಿ ಹಾಗೂ ತಕ್ವಿಯತುಲ್ ಇಸ್ಲಾಂ ಮದ್ರಸ ಇದರ ವತಿಯಿಂದ ವಿಜೃಂಭಣೆಯಿಂದ ಸ್ವಾತಂತ್ಯ್ರ ದಿನಾಚರಣೆ ಆಚರಿಸಲಾಯಿತು. ಮಸೀದಿಯ ಅಧ್ಯಕ್ಷರಾದ ಉಪ್ಪಂಞಿ ಹಾಜಿ ಬನಾರಿ ಧ್ವಜಾರೋಹಣ ನೆರವೇರಿಸಿದರು. ಜಮಾಅತಿನ ಪದಾಧಿಕಾರಿಗಳು, ಅಧ್ಯಾಪಕರು ವಿದ್ಯಾರ್ಥಿಗಳು ಹಾಗೂ ಊರಿನವರು ಉಪಸ್ಥಿತರಿದ್ದರು.