ಕಾಣಿಯೂರು: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಭಾತ್ ಫೇರಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದೇವರಾಜ್ ನೂಜಿ ಧ್ವಜಾರೋಹಣ ಮಾಡಿದರು.
ನಂತರ ನಿವೃತ್ತ ಮುಖ್ಯ ಶಿಕ್ಷಕ ಕುಶಾಲಪ್ಪ ಬಿ ಇವರು ಬ್ಯಾಂಡ್ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಘೋಷಣೆಗಳನ್ನು ಕೂಗುತ್ತಾ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಎಸ್ ಡಿ ಎಂ ಸಿ ಯವರು, ಪೋಷಕರು ಹಾಗೂ ಊರವರು ಮೆರವಣಿಗೆಯಲ್ಲಿ ಭಾಗವಹಿಸಿದರು.

ಬಳಿಕ ನಡೆದ ಶಾಲಾ ಸಭಾ ಕಾರ್ಯಕ್ರಮದಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ದತ್ತಿನಿಧಿ ದಾನಿಗಳಾದ ಆನಂದ ಗೌಡ ಬರೆಪ್ಪಾಡಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಕುದ್ಮಾರು, ನಿವೃತ್ತ ಜೆ ಇ, ಶೂರಪ್ಪ ಗೌಡ ಪಟ್ಟೆತ್ತಾನ, ಯೋಗೀಶ್ ಬರೆಪ್ಪಾಡಿ, ರಂಜಿತ್ ಮುದ್ಯಾ, ಗ್ರಾ.ಪಂ ಸದಸ್ಯೆ ತಾರಾ ಅನ್ಯಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಶಾಲಾ ಮುಖ್ಯಗುರು ಶ್ರೀಲತಾ, ವಿದ್ಯಾರ್ಥಿ ನಾಯಕಿ ಫಾತಿಮತ್ ಶೈಮಾ ಉಪಸ್ಥಿತರಿದ್ದರು.
ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳು ಭಾಷಣ ಮಾಡಿದರು ಹಾಗೂ ದೇಶಭಕ್ತಿ ಗೀತೆಯನ್ನು ಹಾಡಿದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ದತ್ತಿ ನಿಧಿಗಳನ್ನು ವಿತರಿಸಲಾಯಿತು. ಇದನ್ನು ಶಾಲಾ ಶಿಕ್ಷಕಿ ವೀಣಾ ಕೆ ಹಾಗೂ ಪ್ರಿಯಾಂಕಾ ಕೆಎಸ್ ನಿರ್ವಹಿಸಿದರು. ವಿದ್ಯಾರ್ಥಿಗಳ ದೇಶಭಕ್ತಿ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರು ಶ್ರೀಲತಾ ಸ್ವಾಗತಿಸಿ, ಶಾಲಾ ಶಿಕ್ಷಕಿ ಸುಜಾತ ಬಿ ವಂದಿಸಿದರು. ಕಾರ್ಯಕ್ರಮವನ್ನು ಸುಜಾತ ಎ ನಿರೂಪಿಸಿದರು.
ಶಿಕ್ಷಕಿಯರಾದ ವೀರ ಡಿಸೋಜಾ, ಸರೋಜಾ ಕೆ, ಸಂಧ್ಯಾ, ಸುಮಲತಾ ಹಾಗೂ ಭವ್ಯ ಸಹಕರಿಸಿದರು.ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿಯ ಸದಸ್ಯರು, ಪೋಷಕರು, ಊರವರು, ಹಿರಿಯ ವಿದ್ಯಾರ್ಥಿಗಳು ಸಂಖ್ಯೆಯಲ್ಲಿ ಭಾಗವಹಿಸಿದರು.