ಅಧ್ಯಕ್ಷ ರಾಮ್ ಭಟ್ ಪಾತಾಳ, ಪ್ರ.ಕಾರ್ಯದರ್ಶಿ ಪ್ರೇಮ್‌ರಾಜ್
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿಜಿಸ್ಟರ್ಡ್ ಪುತ್ತೂರು ಇದರ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸುಭದ್ರ ಬಳಿ ಇರುವ ಟ್ರಸ್ಟಿನ ಕೇಂದ್ರ ಕಚೇರಿಯಲ್ಲಿ ಆ.14 ರಂದು ನಡೆಯಿತು. ಟ್ರಸ್ಟಿನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಇವರ ಉಪಸ್ಥಿತಿಯಲ್ಲಿ , ಪ್ರಸ್ತುತ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಟ್ರಸ್ಟಿನ ನೂತನ ಅಧ್ಯಕ್ಷರಾಗಿ ರಾಮ್ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೇಮ್ ರಾಜ್ ಅರ್ಲಪದವು , ಕೋಶಾಧಿಕಾರಿಯಾಗಿ ರೂಪೇಶ್ ನಾೖಕ್ ಟಿ. ಪುತ್ತೂರು ಇವರನ್ನು ನಿರ್ದೇಶಕರುಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷ ಚಂದಪ್ಪ ಮೂಲ್ಯ ,ಮಾಜಿ ಅಧ್ಯಕ್ಷ ಪ್ರಸನ್ನ ಮಾರ್ತ , ಮಾಜಿ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು , ಕೋಶಾಧಿಕಾರಿ ಗಣೇಶ್ ಚಂದ್ರ ಭಟ್ ಮಕರಂದ ,ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ, ಉಪಸ್ಥಿತರಿದ್ದರು. ಸಭೆಯಲ್ಲಿ ಟ್ರಸ್ಟಿನ ಗೌರವ ಸಲಹೆಗಾರರು ಉಪಾಧ್ಯಕ್ಷರುಗಳು ಮತ್ತು ಎಲ್ಲಾ ನಿರ್ದೇಶಕರುಗಳು ಹಾಜರಿದ್ದರು.
ಟ್ರಸ್ಟಿನ 2024-25ನೆ ಸಾಲಿನಲ್ಲಿ ಟ್ರಸ್ಟ್ ನ್ನ ಮುನ್ನಡೆಸಿದ ಅಧ್ಯಕ್ಷರಿಗೆ, ಪ್ರದಾನ ಕಾರ್ಯದರ್ಶಿಗೆ ಹಾಗೂ ಕೋಶಾಧಿಕಾರಿ ತಮ್ಮ ಒಂದು ವರ್ಷದ ಅವಿಸ್ಮರಣೀಯ ಸೇವೆಗೆ ಸಂಚಾಲಕರು ಶಾಲು ಹಾಕಿ ಗೌರವಾರ್ಪಣೆ ಮಾಡಿದರು. ರವಿಕುಮಾರ್ ರೈ ಸ್ವಾಗತಿಸಿ, ಮಾಧ್ಯಮ ಪ್ರಮುಖರಾದ ನವೀನ್ ರೈ ಪಂಜಳ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.