ನಿಡ್ಪಳ್ಳಿ; ಏಕತ್ತಡ್ಕ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಿವೃತ್ತ ಪೊಲೀಸ್ ಕಾನ್ ಸ್ಟೆಬಲ್ ದಿವಾಕರ ಇವರು ಧ್ವಜಾರೋಹಣ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಮೋಹನ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರು, ಸದಸ್ಯರು, ಮುಖ್ಯಪಾಧ್ಯಾಯರು, ಊರಿನ ಗಣ್ಯ ವ್ಯಕ್ತಿಗಳು, ಕೊಡುಗೈ ದಾನಿಗಳು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಗುರು ಚಿತ್ರಾ ರೈ ಹೆಚ್ ಸ್ವಾಗತಿಸಿದರು, ಜಿ ಪಿ ಟಿ ಶಿಕ್ಷಕ ಪ್ರೀತಮ್ ವಂದಿಸಿದರು, ಅತಿಥಿ ಶಿಕ್ಷಕಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು.
* ಅಟಿಡೊಂಜಿ ದಿನ ಕಾರ್ಯಕ್ರಮ; ವಿದ್ಯಾರ್ಥಿಗಳು,ಶಿಕ್ಷಕರು,ಪೋಷಕರು, ಹಿರಿಯ ವಿದ್ಯಾರ್ಥಿಗಳು ಮೆರವಣಿಗೆ ಹೋಗಿ ಶಾಲೆಯನ್ನು ತಲುಪಿದ ಬಳಿಕ ಆಟಿಡೊಂಜಿ ದಿನವನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿ ವಿಶ್ರಾಂತ ಆಂಗ್ಲ ಉಪನ್ಯಾಸಕ ಸೂರ್ಯನಾರಾಯಣ ಭಟ್ ಇವರು ಆಟಿ ದಿನಗಳ ಆಚರಣೆ, ನಡೆದು ಬಂದ ರೀತಿಯನ್ನು ಅತ್ಯಂತ ಚೆನ್ನಾಗಿ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕಿ ಚಿತ್ರಾ ರೈ ಸ್ವಾಗತಿಸಿದರು, ಗೌರವ ಶಿಕ್ಷಕಿ ಮಧುಶ್ರೀ ವಂದಿಸಿದರು, ಜ್ಞಾನದೀಪ ಶಿಕ್ಷಕಿ ಜ್ಯೋತಿ ವಿಜೇತರ ಪಟ್ಟಿಯನ್ನು ವಾಚಿಸಿದರು, ಅತಿಥಿ ಶಿಕ್ಷಕಿ ಲಕ್ಷ್ಮೀ ನಿರೂಪಿಸಿದರು.